Ad Widget .

ಜೂ.21ರಿಂದ ವ್ಯಾಕ್ಸಿನೇಷನ್‌ ಹೊಸ ಅಭಿಯಾನ, ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ವ್ಯಾಕ್ಸಿನ್

ನವದೆಹಲಿ: ಜೂನ್ 7 ರಂದು ಪ್ರಧಾನಿ ಮೋದಿ ಘೋಷಿಸಿದಂತೆ, ಕೋವಿಡ್ -19 ವ್ಯಾಕ್ಸಿನೇಷನ್‌ನ ಹೊಸ ಅಭಿಯಾನ ಜೂನ್ 21 ರಿಂದ ಪ್ರಾರಂಭವಾಗಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲಾಗುವುದು.

Ad Widget . Ad Widget .

ವ್ಯಾಕ್ಸಿನೇಷನ್ ಡ್ರೈವ್‌ ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ -19 ಲಸಿಕೆಗಳನ್ನು ನೀಡಲಿದ್ದು, ಲಸಿಕೆ ನೀತಿಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ, ರಾಜ್ಯಗಳು ಲಸಿಕೆ ಉತ್ಪಾದಕರಿಂದ ಲಸಿಕೆಗಳನ್ನು ಸಂಗ್ರಹಿಸಬೇಕಾಗಿಲ್ಲ. ಕೇಂದ್ರವು ಶೇಕಡ 75 ರಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸಲಿದೆ.
ನಾಳೆಯಿಂದ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳು ಆನ್‌ಸೈಟ್ ನೋಂದಣಿ ಸೌಲಭ್ಯವನ್ನು ಒದಗಿಸುವುದರಿಂದ Cowin.gov.in ನಲ್ಲಿ ಪೂರ್ವ ನೋಂದಣಿ ಕಡ್ಡಾಯವಾಗುವುದಿಲ್ಲ.

Ad Widget . Ad Widget .

Leave a Comment

Your email address will not be published. Required fields are marked *