ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ಏರ್ಪಡಿಸಲಾಗಿತ್ತು. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆಯಾದರೂ ಅದ್ದೂರಿ ಮದುವೆ ಇನ್ನಿತರ ಸಮಾರಂಭಗಳಿಗೆ ಅವಕಾಶವಿಲ್ಲ. ಮನೆಯಲ್ಲಿ ಮದುವೆಗೆ ಅವಕಾಶವಿದ್ದು ನಿಗದಿತ ಜನ ಸೇರಿಸಬಹುದಾಗಿದೆ. ದೇವಸ್ಥಾನದಲ್ಲಿ ನಡೆದ ಮದುವೆಯಲ್ಲಿ ನಿಯಮ ಮೀರಿ ಜನ ಸೇರಿಸಲಾಗಿದೆ. ಪಾಲಿಕೆಯ ನಾಮನಿರ್ದೇಶಿತ ಸದಸ್ಯರೊಬ್ಬರ ಮಗಳು ಸೇರಿದಂತೆ ಐದಾರು ಜೋಡಿ ಮದುವೆ ನಡೆಯುತ್ತಿತ್ತು. ಸುಮಾರು 40ಕ್ಕೂ ಹೆಚ್ಚು ವಾಹನಗಳಲ್ಲಿ ಜನ ಕರೆತರಲಾಗಿತ್ತು. ಮಾಹಿತಿ ಪಡೆದ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ, ಮದುವೆ ನಡೆಸುತ್ತಿರುವವರ ಮತ್ತು ದೇವಾಲಯದ ಸಭಾಂಗಣದಲ್ಲಿ ಅವಕಾಶ ಮಾಡಿಕೊಟ್ಟ ಆಡಳಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ಏರ್ಪಡಿಸಲಾಗಿತ್ತು
. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆಯಾದರೂ ಅದ್ದೂರಿ ಮದುವೆ ಇನ್ನಿತರ ಸಮಾರಂಭಗಳಿಗೆ ಅವಕಾಶವಿಲ್ಲ. ಮನೆಯಲ್ಲಿ ಮದುವೆಗೆ ಅವಕಾಶವಿದ್ದು ನಿಗದಿತ ಜನ ಸೇರಿಸಬಹುದಾಗಿದೆ. ದೇವಸ್ಥಾನದಲ್ಲಿ ನಡೆದ ಮದುವೆಯಲ್ಲಿ ನಿಯಮ ಮೀರಿ ಜನ ಸೇರಿಸಲಾಗಿದೆ. ಪಾಲಿಕೆಯ ನಾಮನಿರ್ದೇಶಿತ ಸದಸ್ಯರೊಬ್ಬರ ಮಗಳು ಸೇರಿದಂತೆ ಐದಾರು ಜೋಡಿ ಮದುವೆ ನಡೆಯುತ್ತಿತ್ತು. ಸುಮಾರು 40ಕ್ಕೂ ಹೆಚ್ಚು ವಾಹನಗಳಲ್ಲಿ ಜನ ಕರೆತರಲಾಗಿತ್ತು. ಮಾಹಿತಿ ಪಡೆದ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ, ಮದುವೆ ನಡೆಸುತ್ತಿರುವವರ ಮತ್ತು ದೇವಾಲಯದ ಸಭಾಂಗಣದಲ್ಲಿ ಅವಕಾಶ ಮಾಡಿಕೊಟ್ಟ ಆಡಳಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿದೆ ಅದ್ದೂರಿ ಮದುವೆಯ ವಿಡಿಯೋ :