Ad Widget .

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಾಗಿದೆ.

Ad Widget . Ad Widget .

ಸೂಲಿಬೆಲೆ ಅವರು, ತನ್ನ ಫೇಸ್ಬುಕ್ ಪೇಜ್ ನಲ್ಲಿ, ‘ದುರದೃಷ್ಟವೇನು ಗೊತ್ತೇ ? ಮೋದಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸು ಆಕ್ಸಿಜೆನ್ ಜನರಿಗೆ ಸಿಗದಂತೆ ದಾಸ್ತಾನು ಮಾಡಿಕೊಂಡಿತು . ವ್ಯಾಕ್ಸಿನ್‌ಗಳನ್ನು ಜನರಿಗೆ ನೀಡದೇ ಕಸದಬುಟ್ಟಿಗೆಸೆಯಿತು. ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಬ್ಲಾಕ್ ಮಾಡಿಕೊಂಡು ಜನ ಸಾಯುವಂತೆ ನೋಡಿಕೊಂಡಿತು. ಕೊನೆಗೆ ಅಮಾಯಕರ ಸಾವನ್ನು ವೈಭವೀಕರಿಸಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿತು. ರಾಷ್ಟ್ರೀಯ ಪಕ್ಷವೊಂದು ನಾಲ್ಕು ಕಾಸಿಗೆ ಈ ಹಂತಕ್ಕೆ ಇಳಿಯಬಹುದೆಂದು ಯಾರೂ ಊಹಿಸಿರಲಿಲ್ಲ’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಬಗ್ಗೆ ಇದೀಗ ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಮುಖಂಡ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Ad Widget . Ad Widget .

ಚಕ್ರವರ್ತಿ ಈ ರೀತಿ ಪೋಸ್ಟ್ ಗಳನ್ನು ಮಾಡುತ್ತಾ ರೈತರು ಮತ್ತು ಮುಸಲ್ಮಾನರ ಮೇಲೆ ಅವಹೇಳನಕಾರಿ ಹೇಳಿಕೆಯನ್ನು ಸಹ ಬರೆದಿರುತ್ತಾರೆ . ಈ ರೀತಿ ಇಲ್ಲ ಸಲ್ಲದ ಯಾವುದೇ ಹುರುಳಿಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯ, ಶಾಂತಿ ಕದಡುವ ಪ್ರಯತ್ನ ಮಾಡುತ್ತಿರುತ್ತಾರೆ. ಪ್ರಚಾರದ ಗೀಳಿಗೆ ರಾಷ್ಟ್ರೀಯ ಪಕ್ಷವೊಂದರ ಮೇಲೆ ಯಾವುದೇ ಆಧಾರಹಿತವಾದ ಗಂಭೀರ ಆರೋಪಗಳಿಗೆ ಸೂಕ್ತ ಆಧಾರ / ಪುರಾವೆಗಳನ್ನು ಸೂಲಿಬೆಲೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *