Ad Widget .

ಸಿಎಂ ಯಡಿಯೂರಪ್ಪ ಇನ್ಮುಂದೆ ಆಂದ್ರ ಗವರ್ನರ್?

ಅಮರಾವತಿ(ಜೂ.19): ನಾಯಕತ್ವ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಡಳಿತರೂಢ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ್ದು, ಈ ವಿಚಾರ ಈಗ ಹೈಕಮಾಂಡ್ ಅಂಗಳ ಸೇರಿದೆ.

Ad Widget . Ad Widget .

ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ನೆರೆ ರಾಜ್ಯ ಆಂಧ್ರಪ್ರದೇಶದ ಗವರ್ನರ್ ಆಗಲಿದ್ದಾರೆಂಬ ವಿಚಾರ ಭಾರೀ ಸದ್ದು ಮಾಡಲಾರಂಭಿಸಿದೆ.
ಹೌದು ಯಡಿಯೂರಪ್ಪ ಅವರು ರಾಜ್ಯಪಾಲರಾಗಲಿದ್ದಾರೆ ಎನ್ನುವುದು ಆಂಧ್ರಪ್ರದೇಶದಲ್ಲಿ ಬಹುಚರ್ಚಿತ ವಿಷಯ. ಕಳೆದ ಎರಡು ದಿನಗಳಿಂದ ತೆಲುಗು ಮಾಧ್ಯಮಗಳಲ್ಲಿ ಕೇವಲ ಇದೊಂದೇ ವಿಚಾರ ಚರ್ಚೆಯಾಗುತ್ತಿದೆ.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಕಂಡು ಬಂದಿರುವ ಸಂದರ್ಭದಲ್ಲಿ ಇಂತಹದ್ದೊಂದು ಚರ್ಚೆ ನಡೆಯುತ್ತಿರುವುದು ಭಾರೀ ಮಹತ್ವ ಪಡೆದಿದೆ.
ಹಾಲಿ ರಾಜ್ಯಪಾಲ ಬಿಶ್ವಭೂಷಣ ಅವರ ಅವಧಿ ಜುಲೈ 23ಕ್ಕೆ ಅಂತ್ಯಗೊಳ್ಳಲಿರುವ ಹಿನ್ನಲೆ ಬಿ. ಎಸ್‌. ಯಡಿಯೂರಪ್ಪ ಹೆಸರು ಮುನ್ನಲೆಗೆ ಬಂದಿದೆ. ಆಂಧ್ರದಲ್ಲಿ ಬಿಎಸ್‌ವೈ ವರ್ಚಸ್ಸು ಬಳಸಿಕೊಂಡು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಬಿಜೆಪಿ ಪ್ಲಾನ್ ಎನ್ನಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *