Ad Widget .

ಇನ್ ಮುಂದೆ ಗಂಡ್ಮಕ್ಳೂ‌ ತಾಯಿಯಾಗಬಹುದಂತೆ!, ಚೈನಾ ವಿಜ್ಞಾನಿಗಳಿಂದ ತಲೆಕೆಟ್ಟ ಪ್ರಯೋಗ

ಬೀಜಿಂಗ್:ಚೀನೀ ವಿಜ್ಞಾನಿಗಳು ವಿಚಿತ್ರ, ಕೇಳಲು ಭಯಾನಕ ಹಾಗೂ ವಿಲಕ್ಷಣ ಪ್ರಯೋಗವೊಂದನ್ನು (Weired Experiment) ನಡೆಸುತ್ತಿದ್ದಾರೆ. ಇತ್ತೀಚೆಗೆ, ಚೀನಾದ ವುಹಾನ್ ಲ್ಯಾಬ್‌ನಿಂದ (Wuhan Lab) ಹೊರಬಂದ ವಿಜ್ಞಾನಿಯೊಬ್ಬರು ಚೀನಾ ಚಿತ್ರ ವಿಚಿತ್ರ ಸಂಶೋಧನೆ ನಡೆಸುತ್ತಿರುತ್ತದೆ ಎಂದು ಹೇಳಿದ್ದಾರೆ. ಚೀನಾದಲ್ಲಿ ನಡೆಸಲಾಗುವ ಇಂತಹ ಹಲವು ಸಂಶೋಧನೆಗಳನ್ನು ಸಾಮಾನ್ಯವಾಗಿ ಇತರ ದೇಶಗಳಲ್ಲಿ ನಿಷೇಧಿಸಲಾಗಿದೆ. ಈ ನಡುವೆ ಚೀನಾದ ವಿಜ್ಞಾನಿಗಳು ಪುರುಷರನ್ನು ಗರ್ಭಿಣಿಯನ್ನಾಗಿಸುವ ಪವಾಡದಲ್ಲಿ ಯಶಸ್ವಿಯಗಿರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದರು ಎನ್ನಲಾಗಿದ್ದು, ಈ ಪ್ರಯೋಗ ಇದೀಗ ಯಶಸ್ವಿಯಾಗಿದೆ ಎನ್ನಲಾಗಿದೆ.

Ad Widget . Ad Widget .

ಚೀನಾದ ವಿಜ್ಞಾನಿಗಳು ನಡೆಸಿದ ಈ ಸಂಶೋಧನೆಯಲ್ಲಿ ಗಂಡು ಇಲಿಗಳ ದೇಹದ ಮೇಲೆ ಪ್ರಯೋಗಗಳನ್ನು ನಡೆಸಲಾಗಿದೆ.
ಇದರಲ್ಲಿ, ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣು ಇಲಿಯ ದೇಹದಿಂದ ತೆಗೆದ ಗರ್ಭಾಶಯವನ್ನು ಗಂಡು ಇಲಿಯ ದೇಹದಲ್ಲಿ ಅಳವಡಿಸಲಾಗಿದೆ (Uterus Transplant). ಇದರ ನಂತರ, ಗಂಡು ಇಲಿಯನ್ನು ಗರ್ಭಿಣಿಯನ್ನಾಗಿಸಿ, ಸಿಜೇರಿಯನ್ ಮೂಲಕ ಮರಿ ಇಲಿಗಳನ್ನು ಹೊರತೆರೆಯಲಾಗಿದೆ. ಈ ಸಂಶೋಧನೆಯ ನಂತರ, ಇದೀಗ ಭವಿಷ್ಯದಲ್ಲಿ ಪುರುಷರು ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ಫೋವರ್ಸ್ ವರದಿಯ ಪ್ರಕಾರ, ಈ ಸಂಶೋಧನೆಯ ನಂತರ, ಮಕ್ಕಳನ್ನು ಹೊಂದಲು ಬಯಸುವ ಟ್ರಾನ್ಸ್ಜೆಂಡರ್ಗಳಿಗೆ ಇದರಿಂದ ಸಹಾಯ ಸಿಗಲಿದೆ ಎನ್ನಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *