ಪಶ್ಚಿಮ ಬಂಗಾಳ: ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಬರ್ಬರವಾಗಿ ಕೊಂದು ಹೆಣಗಳನ್ನು ನೀರಿನ ಟ್ಯಾಂಕ್ ಒಳಗೆ ಮುಚ್ಚಿಟ್ಟು 4 ತಿಂಗಳಿನಿಂದ ನಾಟಕವಾಡಿದ್ದ ಯುವಕನೊಬ್ಬ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.
ರಾಜ್ಯದ ಮಾಲ್ಡ ಜಿಲ್ಲೆಯ ಕಲಿಯಚಲೀಕ್ ಗ್ರಾಮದ ಯುವಕ ಆಸೀಫ್ (19) ತನ್ನ ಮನೆಯವರನ್ನೇ ಕೊಂದ ಪಾಪಿ ಯುವಕ. ಈತ ತನ್ನ ತಂದೆ ಜವಾದ್ ಅಲಿ, ತಾಯಿ ಇರಾ ಬೀಬಿ, ತಂಗಿ ಆರಿಫಾ ಹಾಗೂ ಅಜ್ಜಿ ಅಲೆಕ್ಜಾನ್ರನ್ನು ಕೊಲೆ ಮಾಡಿದ್ದಾನೆ. ಅವರ ದೇಹಗಳನ್ನು ವಾಟರ್ ಟ್ಯಾಂಕ್ನಲ್ಲಿ ಮುಚ್ಚಿಟ್ಟಿದ್ದಾನೆ. ಬಳಿಕ ಯಾರಿಗೂ ಅನುಮಾನ ಬರದಂತೆ ಓಡಾಡಿಕೊಂಡಿದ್ದ. ಆಸಿಫ್ನ ಅಣ್ಣ ತನ್ನ ಕುಟುಂಬದ ನಾಲ್ವರು ಸದಸ್ಯರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಮ್ಮ ಆಸೀಫ್ ನ ಮೇಲೆ ಅನುಮಾನ ಇರುವುದಾಗಿ ಹೇಳಿದ್ದ.
ವಿಚಾರಣೆ ವೇಳೆ ಮೊದಲಿಗೆ ಈ ಪ್ರಕರಣದಲ್ಲಿ ತನ್ನ ಪಾಲಿಲ್ಲವೆಂದು ಪೊಲೀಸರಿಗೆ ಆಸಿಫ್ ಚಳ್ಳೆಹಣ್ಣು ತಿನ್ನಿಸಿದ್ದ. ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಆಸಿಫ್ ಮೇಲೆ ಕಣ್ಣಿಟ್ಟಿದ್ದರು.
ಆತನ ಮೇಲೆ ಅನುಮಾನ ಬಂದು, ವಶಕ್ಕೆ ಪಡೆದು ಪುನಃ ವಿಚಾರಣೆ ನಡೆಸಿದಾಗ ಆತ ಕೊಲೆಯ ವಿಚಾರ ಬಾಯಿ ಬಿಟ್ಟಿದ್ದಾನೆ. ಶವಗಳನ್ನು ಬಚ್ಚಿಟ್ಟಿರುವ ಜಾಗ ತೋರಿಸಿದ್ದಾನೆ. ಪೊಲೀಸರು ಆತನ ವಿಚಾರಣೆ ಮುಂದುವರೆಸಿದ್ದು ಕೊಲೆಗೆ ನಿಜ ಕಾರಣ ತಿಳಿದುಬರಬೇಕಿದೆ.ಪಶ್ಚಿಮ ಬಂಗಾಳ: ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಬರ್ಬರವಾಗಿ ಕೊಂದು ಹೆಣಗಳನ್ನು ನೀರಿನ ಟ್ಯಾಂಕ್ ಒಳಗೆ ಮುಚ್ಚಿಟ್ಟು 4 ತಿಂಗಳಿನಿಂದ ನಾಟಕವಾಡಿದ್ದ ಯುವಕನೊಬ್ಬ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ರಾಜ್ಯದ ಮಾಲ್ಡ ಜಿಲ್ಲೆಯ ಕಲಿಯಚಲೀಕ್ ಗ್ರಾಮದ ಯುವಕ ಆಸೀಫ್ (19) ತನ್ನ ಮನೆಯವರನ್ನೇ ಕೊಂದ ಪಾಪಿ ಯುವಕ. ಈತ ತನ್ನ ತಂದೆ ಜವಾದ್ ಅಲಿ, ತಾಯಿ ಇರಾ ಬೀಬಿ, ತಂಗಿ ಆರಿಫಾ ಹಾಗೂ ಅಜ್ಜಿ ಅಲೆಕ್ಜಾನ್ರನ್ನು ಕೊಲೆ ಮಾಡಿದ್ದಾನೆ. ಅವರ ದೇಹಗಳನ್ನು ವಾಟರ್ ಟ್ಯಾಂಕ್ನಲ್ಲಿ ಮುಚ್ಚಿಟ್ಟಿದ್ದಾನೆ. ಬಳಿಕ ಯಾರಿಗೂ ಅನುಮಾನ ಬರದಂತೆ ಓಡಾಡಿಕೊಂಡಿದ್ದ.
ಆಸಿಫ್ನ ಅಣ್ಣ ತನ್ನ ಕುಟುಂಬದ ನಾಲ್ವರು ಸದಸ್ಯರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಮ್ಮ ಆಸೀಫ್ ನ ಮೇಲೆ ಅನುಮಾನ ಇರುವುದಾಗಿ ಹೇಳಿದ್ದ. ವಿಚಾರಣೆ ವೇಳೆ ಮೊದಲಿಗೆ ಈ ಪ್ರಕರಣದಲ್ಲಿ ತನ್ನ ಪಾಲಿಲ್ಲವೆಂದು ಪೊಲೀಸರಿಗೆ ಆಸಿಫ್ ಚಳ್ಳೆಹಣ್ಣು ತಿನ್ನಿಸಿದ್ದ. ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಆಸಿಫ್ ಮೇಲೆ ಕಣ್ಣಿಟ್ಟಿದ್ದರು. ಆತನ ಮೇಲೆ ಅನುಮಾನ ಬಂದು, ವಶಕ್ಕೆ ಪಡೆದು ಪುನಃ ವಿಚಾರಣೆ ನಡೆಸಿದಾಗ ಆತ ಕೊಲೆಯ ವಿಚಾರ ಬಾಯಿ ಬಿಟ್ಟಿದ್ದಾನೆ. ಶವಗಳನ್ನು ಬಚ್ಚಿಟ್ಟಿರುವ ಜಾಗ ತೋರಿಸಿದ್ದಾನೆ. ಪೊಲೀಸರು ಆತನ ವಿಚಾರಣೆ ಮುಂದುವರೆಸಿದ್ದು ಕೊಲೆಗೆ ನಿಜ ಕಾರಣ ತಿಳಿದುಬರಬೇಕಿದೆ.