Ad Widget .

ಆಂದ್ರದಲ್ಲೂ ಗುಲ್ಲೆಬ್ಬಿಸ್ತಿದೆ ಟಿಪ್ಪು ವಿವಾದ: ಪ್ರತಿಮೆ ರಚಿಸಿದರೆ ನಾಶ ಮಾಡ್ತೇವೆ ಎಂದ ಬಿಜೆಪಿ

ಹೈದರಾಬಾದ್: ಓಟಿಗಾಗಿ ಟಿಪ್ಪು ಪ್ರತಿಮೆಯನ್ನು ನಿರ್ಮಿಸುವುದಾದರೆ ಅದನ್ನು ನಶಿಸುವುದಾಗಿ ಆಂದ್ರ ಬಿಜೆಪಿ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಾ, ಆಂಧ್ರದ ಬಿಜೆಪಿ ನಾಯಕರು ಆಂದೋಲನ ಮಾಡಿ ಟಿಪ್ಪುವಿನ ಪ್ರತಿಮೆ ನಿರ್ಮಿಸಿದರೆ ನೆಲಸಮಗೊಳಿಸುವುದಾಗಿ ಎಚ್ಚರಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆಂಧ್ರದ ಕಡಪದಲ್ಲಿ ಟಿಪ್ಪುವಿನ ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದನ್ನು ಖಂಡಿಸಿ ಜಿನ್ನಾ ರಸ್ತೆ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಹೋದಾಗ ಪೊಲೀಸರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಮತ್ತು ಇತರರನ್ನು ವಶಕ್ಕೆ ತೆಗೆದುಕೊಂಡರು. ವೈಎಸ್ಆರ್ಸಿಪಿ ಕೋಮು ಸೌಹಾರ್ದತೆಯ ನೆಪದಲ್ಲಿ ಮತ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ವಿಷ್ಣುವರ್ಧನ್ ಆರೋಪಿಸಿದರು.
ಟಿಪ್ಪು ಪೂರ್ವಾಗ್ರಹ ಪೀಡಿತ ಎಂದು ಹಿಂದೂ ಸಂಘಟನೆಗಳು, ಹಿಂದೂ ಇತಿಹಾಸಕಾರರು ಬಿಂಬಿಸಿದ್ದಾರೆ. 18 ನೇ ಶತಮಾನದ ಮೈಸೂರು ದೊರೆ ಇತ್ತೀಚೆಗೆ ವಿಶೇಷವಾಗಿ ಕರ್ನಾಟಕದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿದ್ದರು. ಬಲಪಂಥೀಯ ಗುಂಪುಗಳು ಟಿಪ್ಪುವಿನ ಮೇಲೆ ಧಾರ್ಮಿಕ ದ್ವೇಷಿ, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ವಿರೋಧಿ ಎಂದು ಬಿಂಬಿಸಿದ್ದರು.

Ad Widget . Ad Widget . Ad Widget .

ಆಂಧ್ರದ ಕರ್ನೂಲ್, ಅನಂತಪುರಂ, ಕಡಪ, ಮತ್ತು ಚಿತ್ತೂರು ಜಿಲ್ಲೆಗಳಲ್ಲಿನ ಹಲವಾರು ರಾಯಲಸೀಮಾ ಪಟ್ಟಣಗಳಲ್ಲಿ ಹೆಚ್ಚು ​​ಮುಸ್ಲಿಮರಿದ್ದಾರೆ.

Leave a Comment

Your email address will not be published. Required fields are marked *