Ad Widget .

ಸಿದ್ದರಾಮಯ್ಯರೇನು ಮಹಾನ್ ಹರಿಶ್ಚಂದ್ರರೇ…? ಕುಮಾರಸ್ವಾಮಿ ಆಕ್ರೋಶ

ಕೋಲಾರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರು ಮಹಾನ್ ಹರಿಶ್ಚಂದ್ರರೇ? ರಾಜಕೀಯವನ್ನು ನಾನು ಅವರಿಂದ ಕಲಿಯಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಕೋಲಾರದ ಮಾಲೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು‌ ನಗರದಲ್ಲಿ 400 ಎಕರೆ ರೀಡೋ(Re Do) ಮಾಡಿದ್ರಲ್ಲಾ, ಕೆಂಪಣ್ಣ ಅಯೋಗ ವರದಿ ಮಾಡಿದ್ರಲ್ಲ, ಏನಾಯ್ತು ಅದು? 400-500 ಕೋಟಿ ರೂಪಾಯಿ ಲೂಟಿ ಹೊಡೆದ , ಅವರೇನ್ ಸಾಚಾನ?, ಸಿದ್ದರಾಮಯ್ಯರಿಂದ ರಾಜಕೀಯ ಮಾಡೋದನ್ನ ನಾನು ಕಲಿಯಬೇಕಿಲ್ಲ ಎಂದು ಎಚ್. ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Ad Widget . Ad Widget .

2008ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಬಳಿ ನೀವೇ ಹಣ ಪಡೆದಿಲ್ಲವೇ? 2008ರಲ್ಲಿ ಸಿದ್ದರಾಮಯ್ಯ ಆಪ್ತರೊಬ್ಬರು ಹಣ ಪಡೆದಿದ್ದಾರೆ. ನಿಮ್ಮ ಆಪ್ತರು ಎಷ್ಟು ಹಣ ಪಡೆದಿದ್ದರು. ಆಪರೇಷನ್ ಕಮಲದಲ್ಲಿ ಹಣವನ್ನು ಪಡೆದಿದ್ದರು. ಯಾವ ಯಾವ ಸಂಧರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಅಂತಾ ಗೊತ್ತು. ನನ್ನ ಪಕ್ಷದ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಲಘುವಾಗಿ ಮಾತಾಡಿದ್ರೆ ಹುಷಾರ್ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
‘ ನನ್ನ ಪಕ್ಷವನ್ನ ದುಡ್ಡಿಗಾಗಿ ಅಡಮಾನ ಇಟ್ಟಿಲ್ಲ, ಜನರ ಒಳಿತಿಗಾಗಿ ಇರುವ ಪಕ್ಷ ನಮ್ಮದು. ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು’ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ದ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.

Leave a Comment

Your email address will not be published. Required fields are marked *