ತಬ್ಲೀಘಿ ಜಮಾತ್ ಗುರಿಯಾಗಿರಿಸಿ ಕಾರ್ಯಕ್ರಮ ಆರೋಪ | ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡ ಮೇಲೆ ದಂಡ | ಕ್ಷಮೆಯಾಚಿಸಲು ಆದೇಶ

ಬೆಂಗಳೂರು: ತಬ್ಲಿಘಿ ಜಮಾತ್ ಗುರಿಯಾಗಿರಿಸಿ ಅಸಂಬದ್ಧವಾಗಿ ಕಾರ್ಯಕ್ರಮ ಬಿತ್ತರಿಸಿದ ಕನ್ನಡದ ನ್ಯೂಸ್ ಚಾನೆಲ್ ಗಳಾದ ಸುವರ್ಣನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ ವಿಧಿಸಿ ಕ್ಷಮೆಯಾಚಿಸಲು ಆದೇಶಿಸಲಾಗಿದೆ.

Ad Widget ... ..

ಕೊರೋನಾ ಆಕ್ರಮಣ ಆರಂಭದ ದಿನಗಳಲ್ಲಿ ಸರ್ಕಾರದ ಅನುಮತಿ ಮೇರೆಗೆ ತಬ್ಲೀಘಿ ಜಮಾತ್ ಕಾರ್ಯಕ್ರಮ ನಡೆದಿತ್ತು. ಇನ್ನು ಆ ಸಮಯದಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಲು ಆರಂಭಿಸಿದ್ದರಿಂದ ನ್ಯೂಸ್ ಚಾನೆಲ್ ಗಳು ತಮ್ಮ ಚಾನೆಲ್ ನಲ್ಲಿ ತಬ್ಲಿಘಿ ಜಮಾತ್ ನ್ನು ಕೊರೋನ ಹರಡಿಸಲು ಏರ್ಪಡಿಸಲಾಗಿದೆ ಎಂದು ಬಿಂಬಿಸಿದ್ದವು. ಈ ಬಗ್ಗೆ ಮೇ 31 ಮತ್ತು ಏಪ್ರಿಲ್ 4, 2020 ರ ನಡುವೆ ಸುವರ್ಣ ನ್ಯೂಸ್ ನಲ್ಲಿ ಏಳು ಕಾರ್ಯಕ್ರಮಗಳು ಬಿತ್ತರವಾಗಿದ್ದವು. ಇದನ್ನು ವಿರೋಧಿಸಿ ಬೆಂಗಳೂರು ಮೂಲದ ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್ (CAHS), ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಗೆ ದೂರು ಸಲ್ಲಿಸಿತ್ತು.

Ad Widget

NBSA ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು ನೀಡಿದ ಆದೇಶದಲ್ಲಿ, “ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ರೀತಿ ಹೆಚ್ಚು ಆಕ್ಷೇಪಾರ್ಹವಾಗಿತ್ತು. ಸುದ್ದಿ ವರದಿಯು ಶುದ್ಧ ಊಹಾಪೋಹವನ್ನು ಆಧರಿಸಿತ್ತು. ಕಾರ್ಯಕ್ರಮದ ಧ್ವನಿ, ವಸ್ತು, ಭಾಷೆ ಒರಟಾಗಿದ್ದು, ಪೂರ್ವಾಗ್ರಹ ಮತ್ತು ಅಗೌರವದಿಂದ ಕೂಡಿತ್ತು” ಎಂದಿದ್ದಾರೆ. ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕೆ ನ್ಯೂಸ್‌ 18 ಕನ್ನಡಕ್ಕೆ NBSA 1 ಲಕ್ಷ ದಂಡ ವಿಧಿಸಿದೆ. ಅಲ್ಲದೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಎಂದು ಚಾನೆಲ್‌ಗೆ ನಿರ್ದೇಶನ ನೀಡಿದೆ. ಜೊತೆಗೆ ಎಲ್ಲಾ ವೆಬ್ ಪೋರ್ಟಲ್‌ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಪ್ರಾಧಿಕಾರವು ಪ್ರಸಾರಕರಿಗೆ ಆದೇಶಿಸಿದೆ.

Leave a Comment

Your email address will not be published. Required fields are marked *