Ad Widget .

ಮಡಿಕೇರಿ: ಅಂಚೆ ಕಛೇರಿ ಬಳಿ ನಿರಂತರ ಭೂಕುಸಿತ | ಕಾಟಾಚಾರಕ್ಕೆ ನೋಟೀಸ್ ಕೊಟ್ಟಿದ್ದ ಅಧಿಕಾರಿಗಳು

ಮಡಿಕೇರಿ: ಅಂಚೆ ಕಚೇರಿ ಸಮೀಪ ಇರುವ ಹಾಪ್ ಕಾಮ್ಸ್ ಕಟ್ಟಡದ ಸಮೀಪ ಭೂಕುಸಿತ ಉಂಟಾಗಿದೆ. ಸ್ಥಳದಲ್ಲಿ ಖಾಸಗಿ ಕಟ್ಟಡ ನಿರ್ಮಾಣದ ಸಂದರ್ಭ ಸುಮಾರು 30ರಿಂದ 40 ಅಡಿ ಎಷ್ಟು ಮಣ್ಣು ತೆಗೆದು ತೆಗೆದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

Ad Widget . Ad Widget .

ಮಣ್ಣು ತೆಗೆಯುವ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆ ಸಂದರ್ಭದಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ನೋಟಿಸು ಕೊಟ್ಟು ಕಟ್ಟಡದ ಕಾಮಗಾರಿಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದರು. ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ತಡೆಗೋಡೆ ನಿರ್ಮಿಸಿದ ನಂತರವೇ ಕಟ್ಟಡದ ಕಾಮಗಾರಿಯನ್ನು ಮುಂದುವರಿಸುವಂತೆ ಸೂಚಿಸಿ ಅನುಮತಿಯನ್ನು ನೀಡಲಾಗಿತ್ತು. ಇದಕ್ಕೂ ಕ್ಯಾರೆ ಎನ್ನದೆ ಕಟ್ಟಡದ ಮಾಲೀಕರು ಕಟ್ಟಡವನ್ನು ಕಟ್ಟುತ್ತ ಹೋದರು. ನಗರಸಭೆ ನೋಟಿಸ್ ನೀಡಿ ಮೌನಕ್ಕೆ ಶರಣಾಗಿತ್ತು ನೋಟಿಸು ಪಡೆದ ಕಟ್ಟಡದ ಮಾಲೀಕರು ಅದಕ್ಕೆ ಕ್ಯಾರೆ ಎನ್ನದೆ ಕಟ್ಟಡವನ್ನೇ ಮುಂದುವರಿಸುತ್ತಾ ಹೋದರು.

Ad Widget . Ad Widget .

ಹಾಪ್ ಕಾಮ್ಸ್ ಸಂಬಂಧಪಟ್ಟವರು ಶಾಸಕರ ಬಳಿ ತೆರಳಿ ಮಾತನಾಡಿದರೂ ಏನೂ ಪ್ರಯೋಜನವಾಗಿಲ್ಲ. ಈಗ ಸಾಕಷ್ಟು ಪ್ರಮಾಣದಲ್ಲಿ ಬರೆ ಕುಸಿಯುತ್ತಿದೆ. ಜನರ ತೆರಿಗೆ ಹಣದಿಂದ ನೆಲಹಾಸು ಹಾಕಬಾರದು ಸಂಬಂಧಪಟ್ಟ ಕಟ್ಟಡದ ಮಾಲೀಕರಿಂದ ಬರಿಸಬೇಕು. ಮತ್ತು ತಡೆಗೋಡೆ ಪೂರ್ಣ ಆಗುವವರೆಗೂ ಕಟ್ಟಡದ ಅನುಮತಿಯನ್ನು ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ರದ್ದುಗೊಳಿಸಬೇಕು. ಕಾಟಾಚಾರಕ್ಕೆ ನೋಟಿಸ್ ನೀಡಿ ಕಟ್ಟಡವನ್ನು ಕಟ್ಟಲು ಬಿಟ್ಟಿರುವುದೇ ಈ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *