Ad Widget .

ಮಡಿಕೇರಿ:ತನ್ನ ಕಾಲನ್ನು ತಾನೇ ಕಡಿದುಕೊಂಡ ಮದ್ಯಪ್ರಿಯ

ವಿರಾಜಪೇಟೆ: ಮದ್ಯ ಸಿಗಲಿಲ್ಲವೆಂದು ಕುಪಿತಗೊಂಡ ವ್ಯಕ್ತಿಯೊಬ್ಬ ತನ್ನ ಕಾಲನ್ನು ತಾನೇ ಕಡಿದುಕೊಂಡ ಘಟನೆ ತಾಲೂಕಿನ ಅಮ್ಮತ್ತಿ ಎಂಬಲ್ಲಿ ನಡೆದಿದೆ.

Ad Widget . Ad Widget .

ಅಮ್ಮತ್ತಿ ಕಾರ್ಮಾಡು ನಿವಾಸಿ 42 ವರ್ಷದ ಪಾಪಣ್ಣ ಕಾಲು ಕತ್ತರಿಸಿಕೊಂಡ ವ್ಯಕ್ತಿ. ಪಾಪಣ್ಣ ಮದ್ಯವ್ಯಸನಿಯಾಗಿದ್ದ. ನಿತ್ಯ ಬೆಳಗಾದಂತೆ ಕಾಫಿ ಕುಡಿಯುವ ಬದಲು ಎಣ್ಣೆ ಹೊಡೆಯುವುದೇ ಈತನ ಅಭ್ಯಾಸವಾಗಿತ್ತು. ಇನ್ನು ಕೆಲದಿನಗಳಿಂದ ಈತನಿಗೆ ಯಾವುದೋ ಕಾರಣದಿಂದ ಮದ್ಯ ಸಿಗುತ್ತಿರಲಿಲ್ಲ ಎನ್ನಲಾಗಿದೆ. ಮದ್ಯ ಸಿಗದೇ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಪಾಪಣ್ಣ ದಿನಾಲು ತಾಯಿಯೊಂದಿಗೆ ಜಗಳವಾಡುತ್ತಿದ್ದ. ಕಳೆದೆರಡು ದಿನಗಳ ಹಿಂದೆ ಕುಪಿತಗೊಂಡು ತನ್ನ ಕಾಲಿಗೆ ತಾನೇ ಕತ್ತಿಯಿಂದ ಕಡಿದುಕೊಂಡಿದ್ದಾನೆ. ಕಡಿದ ರಭಸಕ್ಕೆ ಪಾದದ ಭಾಗ ತುಂಡಾಗಿ ಕೆಳಗೆ ಬಿದ್ದಿದೆ. ವಿಷಯ ತಿಳಿದ ಸ್ಥಳೀಯರು ಆತನನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *