Ad Widget .

ಕನ್ನಡಿಗ ಬಾಲಕನಿಗೆ ಪ್ರಧಾನಿಯಿಂದ ಪ್ರಶಂಸಾ ಪತ್ರ

ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಅದ್ಭುತವಾಗಿ ಬಿಡಿಸಿ ಅವರಿಗೆ ಟ್ವೀಟ್ ಮಾಡಿದ್ದ ಧಾರವಾಡ ಮೂಲದ ಬಾಲಕನಿಗೆ ಪ್ರಧಾನಿ ಪ್ರಶಂಸಾ ಪತ್ರ ಕಳುಹಿಸಿದ್ದಾರೆ.

Ad Widget . Ad Widget .

ಜಿಲ್ಲೆಯ ಮಾಡರಗಿ ಗ್ರಾಮದ ವಿದ್ಯಾರ್ಥಿ 16 ವರ್ಷದ ಸಚಿನ್ ಮೋದಿಯವರಿಂದ ಮೆಚ್ಚುಗೆ ಪಡೆದ ಬಾಲಕ. ಈತ ಇದುವರೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವಾರು ಮಹನೀಯರ ಪೆನ್ಸಿಲ್ ಸ್ಕೆಚ್ ಚಿತ್ರ ಬಿಡಿಸಿದ್ದಾನೆ. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಮನಸ್ಸು ಮಾಡಿದ್ದ ಸಚಿನ, ಬಾಲ್ಯದಲ್ಲಿ ಗೋಡೆಗಳಲ್ಲಿ ಗೀಚುತ್ತಿದ್ದನು. ಶಾಲೆಯಲ್ಲಿ ಚಿತ್ರಕಲೆ ತರಗತಿಯಲ್ಲೂ ಅತ್ಯಂತ ಉತ್ಸುಕತೆಯಿಂದ ಚಿತ್ರ ಬಿಡಿಸುತ್ತಿದ್ದನು. ಇದೀಗ ಪೆನ್ಸಿಲ್‌ ಸ್ಕೆಚ್‌ನತ್ತ ಹೆಚ್ಚಿನ ಗಮನ ಹರಿಸಿ ಸಾಕಷ್ಟು ಸಾಧಕರ ಹಾಗೂ ಇತರೆ ಸ್ಕೆಚ್‌ ಮಾಡಿ ಸೈ ಎನಿಸಿಕೊಂಡಿದ್ದಾನೆ ಎಂದು ಆತನ ಪೋಷಕರು ಮತ್ತು ಶಿಕ್ಷಕರು ಹೇಳುತ್ತಾರೆ.

Ad Widget . Ad Widget .

Leave a Comment

Your email address will not be published. Required fields are marked *