Ad Widget .

ಮಂಗಳೂರು: ತಂದೆಯಿಂದಲೇ ಇಬ್ಬರು ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ

ಮಂಗಳೂರು: ಸ್ವತಃ ತಂದೆ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರಗೈದು ಲೈಂಗಿಕವಾಗಿ ಹಿಂಸೆ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Ad Widget . Ad Widget .

17 ಮತ್ತು 18 ವರ್ಷದ ಇಬ್ಬರು ಪುತ್ರಿಯರ ಮೇಲೆ ತಂದೆ ಅತ್ಯಾಚಾರ ನಡೆಸಿದ್ದಾನೆ. ಈತನ ಪತ್ನಿ ಮನೆಯಿಂದ ಹೊರಗೆ ಹೋದ ಕೂಡಲೇ ತನ್ನ ಇಬ್ಬರು ಪುತ್ರಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇನ್ನೂ ಈ ಕಿರಿಕುಳ ಒಂದೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು ಎನ್ನಲಾಗಿದೆ. ಅದರೆ ಇತ್ತೀಚೆಗೆ ಪುತ್ರಿಯರು ತಾಯಿ ಜೊತೆ ಮಾವನ ಮನೆಗೆ ತೆರಳಿದ್ದಾಗ ಘಟನೆ ಬಗ್ಗೆ ಬಾಯಿಬಿಟ್ಟಿದ್ದಾರೆ. ಇದರಂತೆ ಮಾವನ ಕಡೆಯವರು ಸಂತ್ರಸ್ಥ ಯುವತಿಯರ ಮೂಲಕ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

Ad Widget . Ad Widget .

ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸುರತ್ಕಲ್ ಬಳಿಯ ಕಾಟಿಪಳ್ಳ ಪರಿಸರದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಹೆಂಡ್ತಿ ಮಕ್ಕಳ ಮೇಲೆ ಆರೋಪಿ ಹಲ್ಲೆಯನ್ನೂ ನಡೆಸುತ್ತಿದ್ದ ಎಂದು ದೂರಲಾಗಿದೆ.

Leave a Comment

Your email address will not be published. Required fields are marked *