Ad Widget .

ಪುತ್ತೂರು:ಯುವಕರೊಂದಿಗೆ ಆಸ್ಪತ್ರೆಗೆ ಬಂದ ಯುವತಿ | ಮಿಸ್’ಅಂಡರ್’ಸ್ಟ್ಯಾಂಡಿಂಗ್ ಮಾಡಿಕೊಂಡ ಹಿಂಜಾವೇ

ಪುತ್ತೂರು : ಯುವತಿಯೋರ್ವಳು ಅನ್ಯಕೋಮಿನವರ ಜೊತೆ ಆಸ್ಪತ್ರೆಗೆ ಬಂದದನ್ನು ಗಮನಿಸಿದ ಹಿಂಜಾವೇ ಯುವಕರ ಆತುರದ ನಿರ್ಧಾರದಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಜೂ. 17 ರಂದು ಪುತ್ತೂರಿನಲ್ಲಿ ನಡೆದಿದೆ.

Ad Widget . Ad Widget .

ವಿಟ್ಲ‌ಮೂಲದ ನಾಲ್ಕು ಮಂದಿಯ ತಂಡವೊಂದು ಪುತ್ತೂರಿಗೆ ಬಂದಿದ್ದು ಈ ಗುಂಪಿನಲ್ಲಿ ಹಿಂದು ಯುವತಿಯೋರ್ವಳು ಜೊತೆಗಿದ್ದಳು. ಉಳಿದಂತೆ ಇಬ್ಬರು ಯುವಕರು ಹಾಗೂ ಒಬ್ಬಾಕೆ ಯುವತಿ ಅನ್ಯಧರ್ಮದವರಾಗಿದ್ದರು. ಇವರನ್ನು ಗಮನಿಸಿದ ಸಾರ್ವಜನಿಕರಲ್ಲಿ ಅನುಮಾನ ಬಂದು ಹಿಂಜಾವೇಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಈ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರ ತಂಡ ಆ ಯುವಕ ಯುವತಿಯರ ತಂಡವನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ತಕ್ಷಣ ಪೊಲೀಸರು ಯುವತಿಯ ಮನೆಗೆ ಮಾಹಿತಿ ನೀಡಿದ್ದಾರೆ.

Ad Widget . Ad Widget .

ಮಹಿಳೆಯೊಬ್ಬರಿಗೆ ವೈದ್ಯಕೀಯ ಪರೀಕ್ಷೆಗಾಗಿ ಆ ಧರ್ಮದ ಮನೆಯವರೊಂದಿಗೆ ಪುತ್ತೂರು ಆಸ್ಪತ್ರೆಗೆ ಹೊರಟಾಗ ಅನ್ಯಧರ್ಮೀಯ ಯುವತಿಗೂ ಅನಾರೋಗ್ಯದ ಹಿನ್ನಲೆಯಲ್ಲಿ ಆಕೆಯ ಮನೆಯವರೇ ಅವರೊಂದಿಗೆ ಕಳುಹಿಸಿರುವುದಾಗಿ ಯುವತಿ ತಂದೆಯೇ ವಿಚಾರಣೆ ವೇಳೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *