Ad Widget .

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ

ಉತ್ತರ ಪ್ರದೇಶದ: ಇಲ್ಲಿನ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗು ಒಂದು ಪತ್ತೆಯಾಗಿದೆ. ಮರದ ಬಾಕ್ಸ್ ಒಂದರಲ್ಲಿ ಹೆಣ್ಣು ಮಗುವನ್ನು ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ. ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟಿದ್ದು ಮಗುವಿನ ಹೆಸರು ಗಂಗಾ ಎಂದು ಬರೆಯಲಾಗಿದೆ. ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ. ಇದೀಗ ಮಗುವನ್ನು ಆಶಾ ಜ್ಯೋತಿ ಅನಾಥಾಲಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಮಹಾಭಾರತದಲ್ಲಿ ಕೌಂತಯ ದೇಶದ ರಾಜಕುಮಾರಿ ಕುಂತಿ ದೂರ್ವಾಸ ಮುನಿಗಳಿಂದ ಪಡೆದಿದ್ದ ವರವನ್ನು ಪರೀಕ್ಷೆ ಮಾಡಲು ಹೋಗಿ ಸೂರ್ಯನಿಂದ ಕರ್ಣ ಜನಿಸಿದ್ದನು ಎನ್ನುವ ಕಥೆ ಎಲ್ಲರಿಗೂ ಗೊತ್ತು. ಅವಿವಾಹಿತ ಹೆಣ್ಣು ಮಗಳಿಗೆ ಮಗು ಜನಿಸಿದೆ ಎಂದರೆ ಲೋಕದೂಷಣೆಗೆ ಗುರಿಯಾಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಯುವರಾಣಿ ಕುಂತಿ ಆ ಮಗುವನ್ನು ಬುಟ್ಟಿಯಲ್ಲಿ ಇಟ್ಟು ಗಂಗಾನದಿಯಲ್ಲಿ ತೇಲಿ ಬಿಟ್ಟಿದ್ದಳು. ಬಳಿಕ ಆ ಮಗು ರಾಧೆಯ ಹಾಗೂ ಅಧೀರಥ ನಂದನ ಎಂಬ ದಂಪತಿ ಕೈಗೆ ಸಿಕ್ಕಿ ಬೆಳೆಯುತ್ತಾನೆ. ಮುಂದಿನ ದಿನಗಳಲ್ಲಿ ದ್ರೋಣಾಚಾರ್ಯರ ಮೆಚ್ಚಿನ ಶಿಷ್ಯ ಅರ್ಜುನನಿಗೆ ಬಿಲ್ಗಾರಿಕೆಯಲ್ಲಿ ಪ್ರತಿಸ್ಪರ್ಧಿ ಆಗಿದ್ದನು ಎನ್ನುವುದು‌ ಮಹಾಭಾರತದಲ್ಲಿ ತಿಳಿದಿರುವ ಸಂಗತಿ. ಆದರೆ ಇದೀಗ ಮತ್ತೆ ಉತ್ತರ ಪ್ರದೇಶದಲ್ಲಿ ಮಹಾಭಾರತದ ಕರ್ಣನ ಕಥೆ ಮರುಕಳಿಸಿದೆ. ಆದರೆ ಇದು ಕರ್ಣನಲ್ಲ.
ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಗುವಿನ ಸಂಪೂರ್ಣ ಹೊಣೆಯನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದು ಘೋಷಣೆ ಮಾಡಿದ್ದಾರೆ.
ಮರದ ಬಾಕ್ಸ್‌ನಲ್ಲಿದ್ದ ಮಗುವಿನ ಚೀರಾಟ ಕಂಡು ಬಾಕ್ಸ್ ಬಳಿ ತೆರಳಿದ ಮೀನುಗಾರರ ಕಣ್ಣಿಗೆ ಮಗು ಪತ್ತೆಯಾಗಿತ್ತು. ಸ್ಥಳಕ್ಕೆ ನೂರಾರು ಜನರು ಆಗಮಿಸಿ ಅಚ್ಚರಿಯಿಂದ ನೋಡಿದರು. ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿಯೇ ಮಗುವನ್ನು ಸಾಕಿಕೊಳ್ಳುವ ಉದ್ದೇಶದಿಂದ ಮಗುವನ್ನು ಮನೆಗೆ ಕೊಂಡೊಯ್ದಿದ್ದರು. ಆದರೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಪೋಷಕರಿಗಾಗಿ ಹುಡುಕಾಟ ಶುರುವಾಗಿದೆ.

Ad Widget . Ad Widget .

21 ದಿನದ ಮಗುವನ್ನು ಉದ್ದೇಶಪೂರ್ವಕವಾಗಿಯೇ ನದಿ ಬಿಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಗುವನ್ನು ನದಿಗೆ ಬಿಡುವ ಉದ್ದೇಶದಿಂದಲೇ ಮರದ ಪೆಟ್ಟಿಗೆ ರೆಡಿ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ಬಾಕ್ಸ್ ಎಲ್ಲಿ ಮಾಡಲಾಗಿದೆ. ಮಗುವನ್ನು ನದಿಗೆ ಬಿಟ್ಟವರು ಯಾರು.‌.? ಮಗುವನ್ನು ತೇಲಿ ಬಿಡಲು ಕಾರಣ ಏನು ಎನ್ನುವುದನ್ನು ತನಿಖೆ ಮಾಡುತ್ತಿದ್ದಾರೆ. ಕರ್ಣನಂತೆ ಗಂಗಾ ಕೂಡ ನದಿಯಲ್ಲಿ ತೇಲಿ ಬಂದಿದ್ದಾಳೆ. ಸರ್ಕಾರ ಸಾಕುವ ಹೊಣೆ ಹೊತ್ತಿದೆ. ಮುಂದೆ ಪಾಲಕರು ಯಾರು ಎನ್ನುವುದು ಗೊತ್ತಾಗುತ್ತಾ ಅನ್ನೋದೇ ಕುತೂಹಲ.

Ad Widget . Ad Widget .

Leave a Comment

Your email address will not be published. Required fields are marked *