ಕಾರವಾರ: ಮೀನುಗಾರಿಕೆ ವೇಳೆ ಸಮುದ್ರದಲ್ಲಿ ವಾಸಿಸುವ ವಿಷಕಾರಿ ಹಾವೊಂದು ಮೀನುಗರರ ಬಲೆಗೆ ಬಿದ್ದಿದೆ. ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಲಾಗಿದೆ.
ಇದನ್ನು ‘ಹೈಡ್ರೋಫಿಸ್ ಸ್ಕಿಸ್ಟೋಸಸ್’ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟಿ ಹೊಂದಿರುವ ಹಾವು ನೋಡಲು ವಿಶೇಷವಾಗಿದೆ. ಅಪರೂಪವಾಗಿ ಕಾಣಸಿಗುವ ಈ ಹಾವನ್ನು ನೋಡಿ ಮೀನುಗರಾರು ಮತ್ತು ಸ್ಥಳೀಯರು ಖುಷಿಪಟ್ಟಿದ್ದಾರೆ. ಇದು ಸಮುದ್ರದಲ್ಲಿ ಕ್ಯಾಟ್ ಫಿಶ್‌ಗಳ ಮರಿಗಳನ್ನು ತಿಂದು ಜೀವಿಸುತ್ತದೆ. ಬಹಳ ಶಾಂತ ಸ್ವಭಾವದ ಈ ಹಾವುಗಳು ಕೆಲವೊಮ್ಮೆ ಆಕಸ್ಮಿಕವಾಗಿ ಮೀನುಗಾರರ ಏಂಡಿ ಬಲೆಗೆ ಬೀಳುತ್ತವೆ. ಈ ಹಾವು ಸಾಮಾನ್ಯವಾಗಿ ಮನುಷ್ಯರಿಗೆ ಕಚ್ಚುವುದಿಲ್ಲ. ಒಂದು ವೇಳೆ ಆಕಸ್ಮಿಕವಾಗಿ ಕಚ್ಚಿದರೆ ಜೀವಕ್ಕೆ ಅಪಾಯ ಹೆಚ್ಚು ಎಂದು ಕಾರವಾರದ ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕರು ಹೇಳಿದ್ದಾರೆ.