Ad Widget .

ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ WTC ಫೈನಲ್ ಹಣಾಹಣಿ | ಬಲಿಷ್ಠ ವಿರಾಟ್ ಬಳಗವೇ ಗೆಲ್ಲೊ ಫೇವರಿಟ್

ಸೌತಾಪ್ಟನ್: ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಇಂದು ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದೆ. ಜೂನ್ 22 ರ ವರೆಗೆ ನಡಲಿರುವ ಹಣಾಹಣಿ ಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಪರಸ್ಪರ ಸೆಣಸಾಡಲಿವೆ.

Ad Widget . Ad Widget .

ಸೀಮಿತ ಓವರ್ಗಳಲ್ಲಿ ವಿಶ್ವ ಕಪ್ ನಡೆಸುತ್ತಿರುವಂತೆ ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಯುದ್ಧ ನಡೆಸಲು ಐಸಿಸಿ ತೀರ್ಮಾನಿಸಿತ್ತು. ಅದರಂತೆ 2019 ರಲ್ಲಿ ಜಗತ್ತಿನ 9 ಬಲಿಷ್ಠ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಲೀಗ್ ಪಂದ್ಯಗಳು ಆರಂಭಗೊಂಡಿತ್ತು. ಇದೀಗ ಸುದೀರ್ಘ ಎರಡುವರೆ ವರ್ಷಗಳ ಬಳಿಕ ಫೈನಲ್ ಪಂದ್ಯ ಇಂಗ್ಲೆಂಡ್ ನ ಸೌತಾಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ಮತ್ತು ವಿಶ್ವ ಟೆಸ್ಟ್ ರಾಂಕಿಂಗ್ ನಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಕಿವಿಸ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ರಿಯಲ್ ಕ್ರಿಕೆಟ್ ನ ಉದ್ಘಾಟನಾ ಆವೃತ್ತಿಯ ವಿಶ್ವಕಪ್ ಕಿರೀಟದ ಗರಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡದ್ದೇ ಎಂದು ಕ್ರಿಕೆಟ್ ವಲಯ ಹೇಳುತ್ತಿದೆ. ಫೈನಲ್ ಪಂದ್ಯ ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಮತ್ತು ನ್ಯೂಜಿಲೆಂಡ್ ಬಲಿಷ್ಠ ವೇಗಿಗಳ ನಡುವಿನ ರೋಮಾಂಚನಕಾರಿ ಯುದ್ಧವಾಗುವುದಂತು ನಿಜ. ಭಾರತ ಲೀಗ್ ಹಂತದಲ್ಲಿ ಕಿವೀಸ್ ಎದುರು ಶರಣಾಗಿತ್ತು. ಆದರೆ ಉಳಿದೆಲ್ಲಾ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ತೋರಿ ಅಧಿಕಾರಯುತ ಸರಣಿ ಗೆಲುವು ಸಾಧಿಸಿತ್ತು.

Ad Widget . Ad Widget .

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ನರನ್ನು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅವರದ್ದೇ ನೆಲದಲ್ಲಿ ಬಗ್ಗುಬಡಿದು ಭಾರತ ತಂಡ ಇತಿಹಾಸ ನಿರ್ಮಿಸಿತ್ತು. ಆನಂತರ ತವರಿನಲ್ಲಿ ಇಂಗ್ಲೆಂಡ್ ಎದುರು ಸರಣಿ ಗೆಲ್ಲುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡು ಫೈನಲ್ ಪ್ರವೇಶಿಸಿತ್ತು. ಇದೀಗ ಸರಣಿಯುದ್ಧಕ್ಕೂ ಉತ್ತಮ ಪ್ರದರ್ಶನ ತೋರಿರುವ ಎರಡು ತಂಡಗಳಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎಂದು ಎಂದು ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಭಾರತದಷ್ಟೇ ಬಲಿಷ್ಠವಾಗಿರುವ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಅಂತೂ ಇಂತೂ ಫೈನಲ್ ಪಂದ್ಯ ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲಿದೆ.

ಭಾರತದ ಸಾಂಭವ್ಯ 11ರ ಬಳಗ: ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ (ಉಪನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮಾ, ಮೊಹ್ಮದ್ ಶಮಿ, ಜಸ್ಪ್ರೀತ್ ಬುಮ್ರ.

ತಂಡದಲ್ಲಿರುವ ಇತರೆ ಆಟಗಾರರು: ಮಹಮ್ಮದ್ ಸಿರಾಜ್, ಉಮೇಶ್ ಯಾದವ್, ಹನುಮ ವಿಹಾರಿ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್)

ನ್ಯೂಜಿಲ್ಯಾಂಡ್ ಸಂಭವ್ಯ 11ರ ಬಳಗ: ಡೆವೋನ್ ಕನ್ವಯ್, ಟಾಮ್ ಲತಾಮ್, ಕೇನ್ ವಿಲಿಯಂಸನ್(ನಾಯಕ), ರೋಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ ಜೆ ವೇಟ್ಲಿಂಗ್(ವಿಕೆಟ್ ಕೀಪರ್), ಕಾಲಿನ್ ಡಿ ಗ್ರಾಂಡ್ಹೋಮ್, ಕೈಲ್ ಜೆಮಿಸನ್, ಟಿಮ್ ಸೌಥಿ, ನೀಲ್ ವೇಗ್ನರ್, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್.

ಇತರೆ ಆಟಗಾರರು: ಮ್ಯಾಟ್ ಹೆನ್ರಿ, ವಿಲ್ ಯಂಗ್, ಟಾಮ್ ಬ್ಲಾಂಡೆಲ್.

Leave a Comment

Your email address will not be published. Required fields are marked *