Ad Widget .

ಕಡೆಶಿವಾಲಯ: ಮಳೆಯಬ್ಬರಕ್ಕೆ ಬೃಹತ್ ಮರದ ಜೊತೆ ಧರೆಗುರುಳಿದ ವಿದ್ಯುತ್ ಕಂಬಗಳು

ಬಂಟ್ವಾಳ : ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದೆ. ಬುಧವಾರ ಮಧ್ಯಾಹ್ನ ಸುರಿದ ಭಾರಿ ಗಾಳಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಶಿವಾಲಯ ಗ್ರಾಮದ ಸಂಪೋಳಿಯಲ್ಲಿ ಬೃಹತ್‌ ಗಾತ್ರದ ಗೋಳಿ ಮರವೊಂದು ಧರೆಗುರುಳಿದೆ.

Ad Widget . Ad Widget .

ಸಂಜೆ 4 ಗಂಟೆಯ ವೇಳೆಗೆ ಬೀಸಿದ ಗಾಳಿಗೆ ಬೃಹತ್‌ ಮರ ರಸ್ತೆಗೆ ಉರುಳಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಉರುಳಿ ಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ ಐದಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಕೂಡ ಧರೆಗುರುಳಿವೆ. ಇಲ್ಲಿನ ನಾಗೇಶ್‌ ಸಂಪೋಳಿ ಅವರ ಜಮೀನಿನಲ್ಲಿ ಇದ್ದ ಈ ಮರದ ಪಕ್ಕದಲ್ಲೇ ನಾಲ್ಕೈದು ಮನೆಗಳು ಇದ್ದವು. ಆದೃಷ್ಟವಶಾತ್‌ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ.

Ad Widget . Ad Widget .

ಮೆಸ್ಕಾಂ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮರವನ್ನು ತೆರವುಗೊಳಿಸುವ ಕಾರ್ಯ ಆರಂಭವಾಗುವಾಗಿದೆ.

Leave a Comment

Your email address will not be published. Required fields are marked *