ಇಂದೋರ್: ಕೊರೋನಾ ಎರಡನೇ ಅಲೆಯ ನಡುವೆ ವ್ಯಾಪಾಕವಾಗಿರುವ ಬ್ಲಾಕ್ ಫoಗಸ್, ವೈಟ್ ಫoಗಸ್ ಆಕ್ರಮಣ ಬೆನ್ನಲ್ಲೇ ವ್ಯಕ್ತಿಯೊಬ್ಬರಲ್ಲಿ ‘ಹಸಿರು ಶಿಲೀಂಧ್ರ’ ಸೋಂಕು ಕಾಣಿಸಿಕೊಂಡಿದ್ದು, ಜನರನ್ನು ಭಯಬೀತರನ್ನಾಗಿಸಿದೆ.
ಕೊರೋನ ಸೊಂಕಿಗೊಳಗಾಗಿದ್ದ 34 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಯಾದ ಬಳಿಕ ಆ ವ್ಯಕ್ತಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಪುನಃ ರೋಗಿಯನ್ನು ವೈದ್ಯರು ಪರಿಶೀಲಿಸಿದ್ದಾರೆ. ಆಗ ಆ ವ್ಯಕ್ತಿಗೆ ಹಳದಿ ಶಿಲೀಂದ್ರ ಸೋಂಕು ದೃಡಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಪ್ಪು ಶಿಲೀಂದ್ರ ಎಂದು ತಿಳಿದುಕೊಂಡಿದ್ದ ನಮ್ಮ ತಂಡ ವ್ಯಕ್ತಿಯನ್ನು ಹೆಚ್ಚಿನ ಪರೀಕ್ಷೆಗೊಳಪಡಿಸಿದಾಗ ವ್ಯಕ್ತಿಗೆ ಹಳದಿ ಶಿಲಿಂದ್ರ ಸೋಂಕು ಉಂಟಾಗಿರುವುದು ದೃಢಪಟ್ಟಿದೆ ಎಂದು ಶ್ರೀ ಅರವಿಂದೊ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಎದೆ ರೋಗಗಳ ವಿಭಾಗದ ಮುಖ್ಯಸ್ಥ ಡಾ.ರವಿ ದೋಸಿ ತಿಳಿಸಿದ್ದಾರೆ. ಕೋವಿಡ್‌ನಿಂದ ಗುಣಮುಖರಾದ ಬಳಿಕ ವ್ಯಕ್ತಿಗೆ ಜ್ವರ, ಮೂಗಿನಿಂದ ರಕ್ತಸ್ರಾವ ಕಾಣಿಸಿಕೊಂಡಿತ್ತು.