ಸಿಎಂ ಯಡಿಯೂರಪ್ಪಗೆ ಮತ್ತೆ ಇಡಿ ಸಂಕಟ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬದ 6 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.
ಅಬ್ರಾಹಂ ಎಂಬುವವರು ಸಿಎಂ ಕುಟುಂಬದ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇಡಿಗೆ ದೂರು ನೀಡಿದ್ದು, 2020 ನವೆಂಬರ್ 27ರಂದೇ ಈ ಬಗ್ಗೆ ಇಡಿ ದೂರು ಸ್ವೀಕರಿಸಿದೆ. ಇದೀಗ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರಿಗೆ ಇಡಿ ಸಂಕಷ್ಟ ಕೂಡ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

Ad Widget ... ..

ಪ್ರಕರಣ ಸಂಬಂಧ ಮೊದಲ ಆರೋಪಿಯಾಗಿ ಸಿಎಂ ಯಡಿಯೂರಪ್ಪ, ಎರಡನೆ ಆರೋಪಿಯಾಗಿ ಬಿ.ವೈ.ವಿಜಯೇಂದ್ರ, ಮೂರನೇ ಆರೋಪಿಯಾಗಿ ಮೊಮ್ಮಗ ಶಶಿಧರ್ ಮರಡಿ ಸೇರಿದಂತೆ ಒಟ್ಟು 6 ಜನರ ವಿರುದ್ಧ ದೂರು ನೀಡಿರುವ ಅಬ್ರಾಹಂ, ಹಣ ವರ್ಗಾವಣೆ ಬಗ್ಗೆ ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ಜೊತೆ ಶಶಿಧರ್ ಮರಡಿ ನಡೆಸಿರುವ ವಾಟ್ಸಾಪ್ ಸಂಭಾಷಣೆ ಸಮೇತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪಿಎಂಎಲ್ ಎ ಅಡಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಇದೀಗ ಸಿಎಂ ಬಿಎಸ್ ವೈ ಹಾಗೂ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲೂ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Ad Widget

Leave a Comment

Your email address will not be published. Required fields are marked *