Ad Widget .

ಮೂವರ ಬದುಕಿಗೆ ಆಸರೆಯಾದ ಸಂಚಾರಿ ವಿಜಯ್

ಬೆಂಗಳೂರು: ಬೈಕ್‌ ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್‌ ಅವರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ನೀಡುವ ಕುಟುಂಬಸ್ಥರು ದಾನ ಮಾಡಿದ್ದಾರೆ.
ವಿಜಯ್‌ ಅವರ ಮೂತ್ರಪಿಂಡಗಳನ್ನು ಲಗ್ಗೆರೆ ಮೂಲದ 34 ವರ್ಷದ ಮಹಿಳೆಯೊಬ್ಬರಿಗೆ ಚಿಕಿತ್ಸೆ ಮೂಲಕ ಜೋಡಣೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ವಿಜಯ್‌ ಅವರ ಬ್ಲಡ್ ಗ್ರೂಪ್ , ಡಿ ಎನ್ ಎ , ಕಿಡ್ನಿ ಸೈಜ್ ಎಲ್ಲವೂ ಮಹಿಳೆಗೆ ಮ್ಯಾಚ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಅವರ ಒಂದು ಕಿಡ್ನಿ ಮಹಿಳೆಗೆ ಯಶಸ್ವಿಯಾಗಿ ಟ್ರಾನ್ಸ್‌ಪ್ಲಾಂಟೇಷನ್ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅದೇ ಇನ್ನೊಂದೆಡೆ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ವಿಜಯ್‌ ಅವರ ಕಣ್ಣುಗಳನ್ನು ಜೋಡಿಸುವ ಕಾರ್ಯ ಸಾಗಿದ್ದು, ಒಬ್ಬರಿಗೆ ಕಣ್ಣು ಜೋಡಣೆ ಕಾರ್ಯ ಮುಕ್ತಾಯಗೊಂಡಿದೆ.
ದೃಷ್ಟಿ ಕಳೆದುಕೊಂಡಿದ್ದ ಇಬ್ಬರ ಬಾಳಲ್ಲಿ ವಿಜಯ್‌ ಅವರು ಬೆಳಕು ನೀಡಿದ್ದಾರೆ.
ಸಂಚಾರಿ ವಿಜಯ್ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 8 ರಿಂದ 10ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ನಂತರ ಸಂಜೆ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಟ ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *