ಕಳಪೆ ಪ್ರದರ್ಶನ: ಟೀಂ ಇಂಡಿಯಾದಲ್ಲಿ ಮುಂದುವರೆಯಲು ಮನೀಶ್ ಪಾಂಡೆಗೆ ಇದು ಲಾಸ್ಟ್ ಚಾನ್ಸ್

ಮುಂಬೈ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಪಂದ್ಯವಾಡಲು ಟೀಂ ಇಂಡಿಯಾದ ಎರಡನೇ ತಂಡ ಕೊಲೊಂಬೋಗೆ ಪ್ರಯಾಣ ಬೆಳೆಸಲಿದೆ. ಈ ತಂಡದಲ್ಲಿ ಕನ್ನಡಿಗ ಮನೀಶ್ ಪಾಂಡೆಗೂ ಸ್ಥಾನ ಸಿಕ್ಕಿದೆ.

Ad Widget ... ..

ಕಳೆದ ಕೆಲವು ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲು ಪರದಾಡುತ್ತಿದ್ದ ಪಾಂಡೆಗೆ ಈಗ ಕೊನೆಗೂ ಅವಕಾಶವೊಂದು ಸಿಕ್ಕಿದೆ. ಅದನ್ನು ಅವರು ಯಾವ ರೀತಿ ಬಳಸುತ್ತಾರೆ ಎಂದು ನೋಡಬೇಕಿದೆ.

Ad Widget

ಯಾಕೆಂದರೆ ಈ ಹಿಂದೆ ಮಧ‍್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಸರಾಸರಿ ಪ್ರದರ್ಶನ ನೀಡಿದ್ದ ಮನೀಶ್ ಪಾಂಡೆ ಕೊನೆಗೆ ಫಾರ್ಮ್ ಕಳೆದುಕೊಂಡು ತಂಡಕ್ಕೆ ಆಯ್ಕೆಯೇ ಆಗುತ್ತಿರಲಿಲ್ಲ. ಇದೀಗ ಲಂಕಾ ಪ್ರವಾಸಕ್ಕೆ ಅವಕಾಶ ಪಡೆದಿದ್ದಾರೆ. ಈ ಬಾರಿ ಅವರು ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ಟೀಂ ಇಂಡಿಯಾ ಸೀಮಿತ ಓವರ್ ಗಳಲ್ಲಿ ಸ್ಥಿರ ಸ್ಥಾನ ಪಡೆಯಬಹುದಾಗಿದೆ.
ಒಂದು ವೇಳೆ ವಿಫಲರಾದರೆ ಮತ್ತೆ ಅವರಿಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕ್ಷೀಣವಾಗಲಿದೆ.

Leave a Comment

Your email address will not be published. Required fields are marked *