Ad Widget .

ಮೈಸೂರಲ್ಲೊಬ್ಬ ಉಕ್ಕಿನ ಮನುಷ್ಯ, ಮಗನ ಶವವನ್ನು ಮನೆಯಲ್ಲೇ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟ ಅಂಬ್ಯುಲೆನ್ಸ್ ಡ್ರೈವರ್…!

ಮೈಸೂರು: ಮನೆಯಲ್ಲಿ ಮಗ ಮೃತಪಟ್ಟಿದ್ದರೂ ಆತನ ಶವವನ್ನು ಮನೆಯಲ್ಲಿಯೇ ಬಿಟ್ಟು ಆಂಬ್ಯುಲೆನ್ಸ್‌ ಚಾಲಕ ಒಬ್ಬರು ಕರ್ತವ್ಯ ಕರೆಗೆ ಓಗೊಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

Ad Widget . Ad Widget .

ಸಹಾಯವಾಣಿ ಕೇಂದ್ರದ ಅಂಬ್ಯುಲೆನ್ಸ್‌ ಡ್ರೈವರ್‌ ಆಗಿರುವ ಮುಬಾರಕ್ ಅವರಿಗೆ ಎಲ್ಲೆಡೆಯಿಂದ ಜನರು ಕೊಂಡಾಡುತ್ತಿದ್ದಾರೆ. ಮೈಮೇಲೆ ಬಿಸಿನೀರು ಬಿದ್ದ ಕಾರಣ ಇವರ ಮಗುವು ಮೃತಪಟ್ಟಿತ್ತು. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಮಗುವಿನ ಸಾವಿನಿಂದ ಕಂಗೆಟ್ಟು ಹೋಗಿದ್ದ ನಡುವೆಯೇ ಸಹಾಯವಾಣಿಯಿಂದ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವಂತೆ ಕರೆ ಬಂದಿದೆ.

Ad Widget . Ad Widget .

ಮೈಸೂರಿನ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ ರೋಗಿಯನ್ನು ಸಾಗಿಸಬೇಕಿತ್ತು. ಆದರೆ ತಡ ಮಾಡದ ಮುಬಾರಕ್‌ ಅವರು ಶವವನ್ನು ಮನೆಯಲ್ಲಿಯೇ ಬಿಟ್ಟು ಅದೇ ದುಃಖದೊಂದಿಗೆ ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ.ಇವರ ಕರ್ತವ್ಯ ಪ್ರಜ್ಞೆಗೆ ಆಸ್ಪತ್ರೆಯ ಸಿಬ್ಬಂದಿ ಮೂಕ ವಿಸ್ಮಿತರಾಗಿದ್ದಾರೆ.

Leave a Comment

Your email address will not be published. Required fields are marked *