ಒರಿಸ್ಸಾ: ಸ್ನಾನಕೆಂದು ನದಿಗೆ ಇಳಿದ ವ್ಯಕ್ತಿಯನ್ನು ಮೊಸಳೆ ಹೊತ್ತೊಯ್ದ ಘಟನೆ ಓರಿಸ್ಸಾದ ಜಗನ್ನಾಥಪುರ ಎಂಬಲ್ಲಿ ನಡೆದಿದೆ.
ಗ್ರಾಮದ ಕೇಂದ್ರಪುರದ ಬ್ರಹ್ಮಾಣಿ ನದಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಒಂದು ವಾರದಲ್ಲಿ ಈ ಊರಿನಲ್ಲಿ ಮೊಸಳೆ ದಾಳಿಗೆ ಮನುಷ್ಯ ಬಲಿಯಾಗುತ್ತಿರುವುದು ಇದು 2 ನೇ ಘಟನೆ. ಕಳೆದ 3 ದಿಗಳ ಹಿಂದೆ ಇಬ್ಬರು ವ್ಯಕ್ತಿಗಳು ಮೊಸಳೆ ದಾಳಿಗೆ ಬಲಿಯಾಗಿದ್ದಾರೆ. ಸೋಮವಾರ ಮಧ್ಯಾಹ್ನ 1:30 ಗಂಟೆಗೆ ಜಗನ್ನಾಥಪುರ ಗ್ರಾಮದ ಪುರುಷೋತ್ತಮ್ ಧಾಲ್ ಎಂಬುವವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೊಸಳೆ ಅವರನ್ನು ನದಿಯ ಆಳಕ್ಕೆ ಎಳೆದುಕೊಂಡು ಹೋಗಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಜೋರಾಗಿ ಕಿರುಚಿಕೊಂಡು ವ್ಯಕ್ತಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆ ಹೊತ್ತಿಗಾಗಲೇ ಮೊಸಳೆ ವ್ಯಕ್ತಿಯನ್ನು ಕೊಂದಾಗಿತ್ತು. ಪುರುಷೋತ್ತಮ್ ಅವರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. ಈ ಊರಿಗೆ ಹೊಂದಿಕೊಂಡು ಬಿಥರ್‌ಕನಿಕಾ ರಾಷ್ಟ್ರೀಯ ಉದ್ಯಾನವನವಿದೆ. ಅದು ಸರಿ ಅಂದಾಜು 2000 ಉಪ್ಪುನೀರಿನ ಮೊಸಳೆಗಳಿಗೆ ಆಶ್ರಯತಾಣವಾಗಿದೆ. ಅದರಲ್ಲಿ ಕೆಲವು ಮೊಸಳೆಗಳು ದಾರಿತಪ್ಪಿ ನದಿ ದಂಡೆಯ ಗ್ರಾಮಗಳತ್ತ ಬರುತ್ತಿವೆ. ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ನದಿ ದಂಡೆಗಳಿಗೆ ಪ್ರವೇಶಿಸದಂತೆ ಗ್ರಾಮಸ್ಥರಿಗೆ ಸೂಚನೆಯನ್ನು ನೀಡಿದ್ದೇವೆ. ನಮ್ಮ ಎಚ್ಚರಿಕೆಯನ್ನು ಲೆಕ್ಕಿಸದೇ ಇರುವುದೇ ಇಂತಹ ಘಟನೆಗಳು ನಡೆಯಲು ಕಾರಣ ಎಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ.