Ad Widget .

ಕಡೂರಿನ ವಿಜಯ ಕುಮಾರ್ `ಸಂಚಾರಿ’ ಯಾಗಿದ್ದು ಹೇಗೆ? ರಾಷ್ಟ್ರಪ್ರಶಸ್ತಿ ವಿಜೇತ ‘ಸಂಚಾರಿ ವಿಜಯ್’ ರ ಲೈಪ್ ಕಹಾನಿ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತ ನಟನೆಯ ಮೂಲಕ ಎಲ್ಲಾರ ಗಮನ ಸೆಳೆದ ನಟ ಸಂಚಾರಿ ವಿಜಯ್‌ರವರು ಇಂದು ನಿಧನರಾಗಿದ್ದಾರೆ. ಇವರು ಇಷ್ಟೊಂದು ಹೆಸರುವಾಸಿಯಾಗಲು ನಡೆದು ಬಂದ ಹಾದಿಯನ್ನು ಗಮನಸಿದರೆ ಅವರು ಪಟ್ಟ ಶ್ರಮ ಎಷ್ಟಿದೆ ಎನ್ನುವ ವಿಚಾರ ಇಲ್ಲಿದೆ.

Ad Widget . Ad Widget .

ನಟನೆ ಹಾಗೂ ಸಮಾಜಮುಖಿ ಕೆಲಸ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದ ವಿಜಯ್ 37ನೇ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅವರ ಅಕಾಲಿಕ ವಿದಾಯ ಎಲ್ಲರಲ್ಲೂ ಶೋಕ ಮಡುಗಟ್ಟುವಂತೆ ಮಾಡಿದೆ. ಇವರ ನಿಧನಕ್ಕೆ ಚಿತ್ರರಂಗ, ಅಭಿಮಾನಿಗಳು, ಗಣ್ಯರು ಕಂಬನಿಯನ್ನು ಮಿಡಿದಿದ್ದಾರೆ.

Ad Widget . Ad Widget .

ಇವರು ಜುಲೈ 17, 1983ರಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ ಹುಟ್ಟಿದ ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ.

ವಿಜಯ್ ಅವರ ಮೂಲ ಹೆಸರು ವಿಜಯ್ ಕುಮಾರ್ ಬಿ. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ವಿಜಯ್ ರಂಗಭೂಮಿಯಲ್ಲಿ ಪಳಗಿದರು. ಇವರು ‘ಸಂಚಾರಿ’ ಹೆಸರಿನ ನಾಟಕ ತಂಡದಿಂದ ಬಂದ ಕಾರಣ ಇವರಿಗೆ ಸ್ಯಾಂಡಲ್‌ವುಡ್‌ನಲ್ಲಿ
ಸಂಚಾರಿ ವಿಜಯ್ ಎಂಬ ಹೆಸರು ಬಂತು. ನಂತರ `ಸಂಚಾರಿ ವಿಜಯ್’ ಪ್ರಖ್ಯಾತವಾಯ್ತು.

ಚಿತ್ರರಂಗದಲ್ಲಿ ಅದೃಷ್ಟಪರೀಕ್ಷೆಗೆ ಸಾಕಷ್ಟು ಜನರು ಮುಂದಾಗುತ್ತಾರೆ. ಆದರೆ, ಎಲ್ಲರಿಗೂ ಯಶಸ್ಸು ಸಿಗೋದಿಲ್ಲ. ಆದರೆ, ಸಂಚಾರಿ ವಿಜಯ್‌ಗೆ ನಟನಾ ಕಲೆ ಅದ್ಭುತವಾಗಿ ಒಲಿದಿತ್ತು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸುಲಲಿತವಾಗಿ ನಿಭಾಯಿಸುತ್ತಿದ್ದರು. ತಾವು ಸೆಲೆಬ್ರಿಟಿ ಎನ್ನುವ ಯಾವುದೇ ಅಹಂ ಅವರಲ್ಲಿ ಎಂದಿಗೂ ಇರಲಿಲ್ಲ. ಕೊರೊನಾ ಸಂದರ್ಭದಲ್ಲಿ ಸಂಚಾರಿ ವಿಜಯ್ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು. ಈ ಹಿಂದೆ ಕೂಡಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ವಿಜಯ್ ಇದೇ ಕಾರಣಕ್ಕಾಗಿ ಬಣ್ಣದ ಲೋಕದಾಚೆಗೂ ಅಭಿಮಾನಿಗಳನ್ನು ಹೊಂದಿದ್ದರು.

2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ ಸಿನಿಮಾ ಸಂಚಾರಿ ವಿಜಯ್ ಅವರ ಮೊದಲ ಸಿನಿಮಾ. ರಮೇಶ್ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ಕಾಣಿಸಿಕೊಂಡಿದ್ದರು. ಅದೇ ವರ್ಷ ತೆರೆಗೆ ಬಂದ ‘ರಾಮ ರಾಮ ರಘು ರಾಮ’ ಚಿತ್ರದಲ್ಲಿ ವಿಜಯ್ ನಟಿಸಿದರು. 2013ರಲ್ಲಿ ಪ್ರೇಮ್ ನಟನೆಯ ‘ದಾಸ್ವಾಳ’ ಚಿತ್ರದಲ್ಲಿ ಪಾತ್ರ ಒಂದನ್ನು ನಿರ್ವಹಿಸಿದ್ದರು. ೨೦೧೪ರಲ್ಲಿ ಬಂದ ಹರಿವು ಚಿತ್ರದಲ್ಲಿ ಸಂಚಾರಿ ಮೊದಲ ಬಾರಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

2015ರಲ್ಲಿ ತೆರೆಗೆ ಬಂದ ಅವರ ನಟನೆಯ `ನಾನು ಅವನಲ್ಲ ಅವಳು’ ಸಿನಿಮಾ ಸಂಚಾರಿ ವಿಜಯ್ ಅವರ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಚಿತ್ರದಲ್ಲಿ ಅವರ ಅದ್ಭುತ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕವು. ಈ ಚಿತ್ರ ತೆರೆಕಂಡ ನಂತರ ಅವರಿಗೆ ಅವಕಾಶಗಳು ತೀವ್ರವಾಗಿ ಹೆಚ್ಚಿದವು. 2017 ಮತ್ತು 2018ರಲ್ಲಿ ಅವರ ನಟನೆಯ 8-9 ಚಿತ್ರಗಳು ತೆರೆಗೆ ಬಂದವು. ‘ಆ್ಯಕ್ಟ್ 1978’ ಅವರ ಕೊನೆಯ ಚಿತ್ರವಾಗಿದೆ. ವಿಜಯ್ ಸಿನಿಮಾ ಮಾತ್ರವಲ್ಲದೇ ಅನೇಕ ಸಾಮಾಜಿಕ ಕಾರ್ಯಗಳ ಮೂಲಕವಾಗಿಯೂ ತಮ್ಮನ್ನೂ ತಾವು ಗುರುತಿಸಿಕೊಮಡಿದ್ದರು. ಇದೀಗಾ ಇವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

Leave a Comment

Your email address will not be published. Required fields are marked *