ಮಂಗಳೂರು: 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಎಂಬ ಮಾಹಿತಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಮಂಗಳೂರು ವಿದ್ಯುತ್ ಸರಬರಾಜು ನಿಗಮ ಅಧಿಕಾರಿಗಳು ನಮ್ಮಿಂದ ಇಂತಹ ಯಾವುದೆ ಆದೇಶ ನೀಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
“ಕೋವಿಡ್ -19 ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಲಾಕ್‌ಡೌನ್‌ನಿಂದಾಗಿ ದಿನನಿತ್ಯ ದುಡಿದು/ ಮಾಸಿಕ ವೇತನವನ್ನು ಅವಲಂಬಿಸಿ ಜೀವನ ನಡೆಸುವ ಬಡ ಮತ್ತು ಮಾಧ್ಯಮ ವರ್ಗದವರ ಆರ್ಥಿಕ ಹೊರೆಯಾಗಿದೆ. ಆರ್ಥಿಕ ಪ್ಯಾಕೇಜ್ ಎಲ್ಲಾರಿಗೂ ತಲುಪದೇ ಇರುವ ಕಾರಣ ೩ ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡುವುದರಿಂದ ಸ್ವಲ್ಪ ಮಟ್ಟಿನ ಪರಿಹಾರವನ್ನು ಒದಗಿಸಿ ಒತ್ತಡ ರಹಿತ ಜೀವನ ನಡೆಸಲು ಅನುಕೂಲ ಮಾಡಲು, ಜವಬ್ದಾರಿಯು ಸರ್ಕಾರವು ಕರೋನಾದ ಈ ಸಕಂಷ್ಟ ಸಮಯದಲ್ಲಿ ಬಡ ಮತ್ತು ಮಾಧ್ಯಮ ವರ್ಗದವರಿಗೆ ಅರ್ಥಿಕ ಹೊರೆಯಿಂದ ಹೊರಬರಲು ಅನುಕೂಲವಾಗುವಂತೆ ಮಾಡಲು ೩ ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲು ಮೇಲಿನ ಉಲ್ಲೇಖದಲ್ಲಿ ತಿಳಿಸಿದ್ದು ಅದರಂತೆ ತಮ್ಮ ಶಾಖಾ ವ್ಯಾಪ್ತಿಯಲ್ಲಿ ಬರುವ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮನೆಯ ಸ್ಥಾವರಗಳ ಆರ್.ಆರ್ ಸಂಖ್ಯೆಯನ್ನು ಕೂಡಲೇ ೩ ದಿನದೊಳಗಾಗಿ ನೀಡಲು ಈ ಮೂಲಕ ಸೂಚಿಸಲಗಿದೆ.” ಎಂಬ ಸುದ್ದಿಯೊಂದು ವೈರಲ್ ಆಗಿತ್ತು.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ನಿಯಮಿತ ಎನ್ನುವ ಹೆಸರಿರುವ ಲೆಟರ್‌ಹೆಡ್‌ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ವೈರಲ್ ಆಗುತ್ತಿರುವ ಬಗ್ಗೆ ಮಾಧ್ಯಮಗಳು ನಿಗಮವನ್ನು ಸಂಪರ್ಕಿಸಿದಾಗ ನಮ್ಮಿಂದ ಯಾವುದೇ ರೀತಿಯ ಪ್ರಕಟಣೆಯನ್ನು ಹೊರಡಿಸಿಲ್ಲ ಮತ್ತು ಜಾಲಾತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಅಲ್ಲದೆ ಯಾರೂಕೂಡ ಅನಗತ್ಯವಾಗಿ ಕೆಇಬಿಗೆ ಬರುವುದು ಬೇಡ ಮತ್ತು ಇಂತಹ ಸುದ್ದಿ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮಾಡಬೇಡಿ ಎಂದು ತಿಳಿಸಿದ್ದಾರೆ.