Ad Widget .

ನಿರಂತರ ಹತ್ತು ದಿನ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ…!

ಒರಿಸ್ಸಾ: ಯುವತಿಯೊಬ್ಬಳನ್ನು ಕತ್ತಲೆ ಕೋಣೆಯೊಂದರಲ್ಲಿ ಕೂಡಿ ಹಾಕಿ 12 ಜನ ಕಾಮುಕರು ಬರೋಬ್ಬರಿ ಹತ್ತು ದಿನ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜ್ಯದ ಪುರಿ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಪುರಿಯ ಕೊನಾರ್ಕ್ ಸೂರ್ಯ ದೇವಾಲಯದ ಸಮೀಪದ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಯುವತಿ ಕೊಲ್ಕತ್ತಾ ಮೂಲದವಳಾಗಿದ್ದು ಕೆಲಸಕ್ಕಾಗಿ ರಾಜ್ಯಕ್ಕೆ ಬಂದಿದ್ದಳು ಎನ್ನಲಾಗಿದೆ. ಈ ಸಮಯದಲ್ಲಿ ಕಾಮುಕರ ಪರಿಚಯವಾಗಿದ್ದು, ಯುವತಿಯನ್ನು ಪುಸಲಾಯಿಸಿ ಕರೆದೊಯ್ದು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ನಿರಂತರ ಹತ್ತು ದಿನ ಅತ್ಯಾಚಾರ ಎಸಗಿದ್ದಾರೆ. ಹತ್ತು ದಿನಗಳಿಂದ ಕಾಮಕರ ವಿಕೃತಿಗೆ ಗುರಿಯಾಗಿದ್ದ ಯುವತಿ ಕೊನೆಗೆ ಕಟ್ಟಡದ ಮೇಲ್ಛಾವಣಿ ಏರಿ ಸಹಾಯಕ್ಕಾಗಿ ಕೂಗಿದ್ದಾಳೆ. ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *