Ad Widget .

ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತ ಸಂತ್ರಸ್ಥೆ ತಾಯಿ…! | ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು

ಮುಂಬೈ: ಕಿರುತೆರೆ ನಟ ಪರ್ಲ್ ವಿ ಪುರಿ ಅಪ್ರಾಪ್ತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿಯ ತಾಯಿಯೇ ನಟ ನಿರಪರಾಧಿ ಎಂದಿದ್ದಾರೆ.

Ad Widget . Ad Widget .

ಕಳೆದೊಂದು ವಾರಗಳ ಹಿಂದೆ ಯುವತಿ ಹಾಗೂ ಯುವತಿಯ ತಂದೆ, ಹಿಂದಿ ಕಿರುತೆರೆ ನಟ ಪರ್ಲ್ ವಿ ಪುರಿ ಮೇಲೆ ಅತ್ಯಾಚಾರ ಪ್ರಕರಣ ಧಾಖಲಿಸಿದ್ದರು. ಧಾರಾವಾಹಿ ಒಂದರಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹೇಳಿ, ನಟ ನೊಂದಿಗೆ ಸೇರಿ ಕೆಲವು ಯುವಕರು ಕಾರೊಂದರಲ್ಲಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿಯೂ ಹೇಳಿಕೆ ನೀಡಿದ್ದಳು. ಇದೀಗ ಆಕೆಯ ತಾಯಿ ಉಲ್ಟಾ ಹೊಡೆದಿದ್ದು ನಟ ಈ ಪ್ರಕರಣದಲ್ಲಿ ಆರೋಪಿಯಲ್ಲ ಎಂದಿದ್ದಾಳೆ. ಇದು ಆರಾಮವಾಗಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಹೊಸ ತಲೆನೋವು ತಂದೊಡ್ಡಿದೆ. ಇನ್ನು ಯಾರ ಹೇಳಿಕೆ ಸತ್ಯ ಎಂಬುದು ಪೂರ್ತಿ ತನಿಖೆಯ ನಂತರವೇ ತಿಳಿದುಬರಲಿದೆ.

Ad Widget . Ad Widget .

ಇನ್ನೊಂದೆಡೆ ಯುವತಿಯ ತಾಯಿ ಮತ್ತು ತಂದೆಯ ನಡುವೆ ಕೌಟುಂಬಿಕ ಕಲಹವಿದ್ದು, ಇದು ಆಕೆಯ ಈ ರೀತಿಯ ಹೇಳಿಕೆಗೆ ಕಾರಣ ಎನ್ನಲಾಗಿದೆ. ಸಂತ್ರಸ್ಥೆಯ ತಾಯಿ ಏಕ್ತಾ ಶರ್ಮಾ ಮತ್ತು ಅವರ ಪತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಗಳನ್ನು ತಮ್ಮ ಸುಪರ್ದಿಗೆ ಪಡೆಯಬೇಕು ಎಂಬ ಕಾರಣಕ್ಕೆ ಇಬ್ಬರ ನಡುವೆ ಜಟಾಪಟಿ ನಡೆಯುತ್ತಲೇ ಬಂದಿದೆ. ಅದೇ ಕಾರಣಕ್ಕಾಗಿ ಏಕ್ತಾ ಶರ್ಮಾ ಹೆಸರಿಗೆ ಮಸಿ ಬಳಿಯಲು ಅವರ ಗಂಡ ಈ ಸುಳ್ಳು ಕೇಸ್​ ದಾಖಲಿಸಿದ್ದಾನೆ ಎನ್ನಲಾಗಿದೆ.

Leave a Comment

Your email address will not be published. Required fields are marked *