Ad Widget .

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್

ನವದೆಹಲಿ: ದೇಶದಲ್ಲಿ ಇಂಧನ ಬೆಲೆ ದಿನೇದಿನೇ ಹೆಚ್ಚಳವಾಗುತ್ತಿದ್ದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ ಬೆನ್ನಲ್ಲಿ ಇಂದು ಡೀಸೆಲ್ ಬೆಲೆ 100 ರೂ. ಗೆ ಮಾರಾಟವಾಗಿದೆ.

Ad Widget . Ad Widget .

ರಾಜಸ್ಥಾನದ ಗಂಗಾನಗರ ಎಂಬಲ್ಲಿ ಇಂದು 100.05 ರೂ. ಗೆ ಮಾರಾಟವಾಗುವ ಮೂಲಕ ಡೀಸೆಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಮೂರಂಕಿ ಬೆಲೆಗೆ ಮಾರಾಟವಾದ ದಾಖಲೆ ಬರೆದಿದೆ.

Ad Widget . Ad Widget .

ಕರ್ನಾಟಕದಲ್ಲಿ ನೂರು ರೂ. ಆಸುಪಾಸಿನಲ್ಲಿ ಪೆಟ್ರೋಲ್ ಮಾರಾಟವಾಗುತ್ತಿದ್ದು, 95ರ ಆಸುಪಾಸಿನ ದರಕ್ಕೆ ಡೀಸೆಲ್ ಬಿಕರಿಯಾಗುತ್ತಿದೆ. ಪ್ರಸ್ತುತ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 102.30 ರೂ. ಮತ್ತು ಡೀಸೆಲ್ ಅನ್ನು ಲೀಟರ್ ಗೆ 94.39 ರೂ. ಕ್ಕೆ ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ ಪೆಟ್ರೋಲ್ ಈಗ ಲೀಟರ್ ಗೆ 96.12 ರೂ. ಮತ್ತು ಡೀಸೆಲ್ ಅನ್ನು ಲೀಟರ್ ಗೆ 86.98 ರೂ.ಗೆ ಮಾರಾಟವಾಗುತ್ತಿದೆ.

Leave a Comment

Your email address will not be published. Required fields are marked *