ಬ್ರೆಸಿಲಿಯಾ: ಹಿಂದೆ ಮನೆಗಳಲ್ಲಾಗುತ್ತಿದ್ದ ಘಟನೆಗಳನ್ನಾಧರಿಸಿ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತು ಹುಟ್ಟಿಕೊಂಡಿತ್ತು. ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಬದಲಾವಣೆಯ ಗಾಳಿ ಬೀಸುತ್ತಿರುವಾಗ, ಆ ಮಾತು ಬದಲಾಗಿದೆ. ಗಂಡ ಹೆಂಡತಿ ನಡುವಿನ ಭಾಂದವ್ಯ ಮಧುವೆ ಸಂಭ್ರಮ ಮುಗಿಯುವ ತನಕ ಎಂಬಂಥಾಗಿದೆ.
ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ದಂಪತಿಗಳ ನಡುವೆ ವಿಚಿತ್ರ ದುರಂತಗಳು ಸಂಭವಿಸುತ್ತಿದೆ. ವಿಚ್ಚೇದನ ಪ್ರಕರಣಗಳಂತು ವಿವಾಹ ನೋಂದಣಿ ಗಿಂತ ಹೆಚ್ಚು ದಾಖಲಾಗುತ್ತಿವೆ. ಇಲ್ಲೊಬ್ಬಳು ಪತ್ನಿ ಜಗಳವಾಡುತ್ತಾನೆ ಎಂಬ ಕಾರಣಕ್ಕೆ ತನ್ನ ಗಂಡನನ್ನೇ ಕೊಲೆ ಮಾಡಿ, ಆತನ ಮರ್ಮಾಂಗವನ್ನು ಕತ್ತರಿಸಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ್ದಾಳೆ. ಈ ನಂಭಲಸಾಧ್ಯವಾದ ಅಮಾನುಷ ಘಟನೆ ನಡೆದದ್ದು ಬ್ರೆಜಿಲ್ನ ಸಾವೊ ಗೊನ್ಕಾಲೊ ನಗರದಲ್ಲಿ. ಆಯಂಡ್ರೆ ಎಂಬಾತ ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊಳನ್ನು ವರಿಸಿ ಎಂಟು ವರ್ಷದ ಮಗ ಹಾಗೂ ಐದು ವರ್ಷದ ಮಗಳಿಗೆ ತಂದೆಯಾಗಿದ್ದ. ಆದರೆ ಅಂದೇ ದಂಪತಿ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿ ಮನೆಯಲ್ಲಿ ನಿತ್ಯ ಕಾದಾಟ ನಡೆಯುತ್ತಿತ್ತು. ಇದೇ ಕಾರಣಕ್ಕೆ ಪತ್ನಿ ಮದುವೆಯಾಗಿ ಹತ್ತು ವರ್ಷಗಳಲ್ಲಿ ಗಂಡನನ್ನು ತೊರೆದು ಬೇರೆಡ ನೆಲೆಸಿದ್ದಾಳೆ. ಆಮೇಲೆ ಎರಡು ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಮತ್ತೆ ದಂಪತಿ ಒಂದಾದಂತೆ ಜಗಳದ ಕಿಚ್ಚು ಮತ್ತೆ ಹತ್ತಿಕೊಂಡಿತ್ತು. ಒತ್ತೀಚೆಗೆ ಅದೇ ಚಾಳಿ ಮುಂದುವರೆಸಿದ್ದ ಗಂಡನ ಚಳಿ ಬಿಡಿಸಲು ಪತ್ನಿ ಖಾತರ್ನಾಕ್ ಯೋಜನೆ ರೂಪಿಸಿದ್ದಾಳೆ. ರಾತ್ರಿ ಜಗಳ ಮಾಡಿ ಮಲಗಿದ್ದ ಪತಿಯನ್ನು ಕ್ರಿಸ್ಟಿನಾ ಮುಂಜಾನೆ 4 ಗಂಟೆಯ ಹೊತ್ತಿಗೆ ಮಲಗಿದ್ದಲ್ಲೇ ಕೊಂದು ಹಾಕಿದ್ದಾಳೆ. ಅಷ್ಟೇ ಅಲ್ಲದೆ ಆತನ ಮೇಲಿದ್ದ ಕೋಪದ ಕುದಿ ಆರಿಸಿಕೊಳ್ಳಲು ಆಯೆಂಡ್ರೆ ಯ ಮರ್ಮಾಂಗವನ್ನು ಕತ್ತರಿಸಿ, ಅದನ್ನು ಎಣ್ಣೆಯಲ್ಲಿ ಅದ್ದಿ ಫ್ರೈ ಮಾಡಿದ್ದಾಳೆ.
ಸದ್ಯ ಪೊಲೀಸರು ಕ್ರಿಸ್ಟಿನಾ ಳನ್ನು ಭಂದಿಸಿದ್ದು, ವಿಚಾರಣೆ ನಡೆಸಿದ್ದಾರೆ. ನನಗೆ ಆಯಂಡ್ರೆ ಅತಿಯಾಗಿ ಚಿತ್ರ ಹಿಂಸೆ ಕೊಡುತ್ತಿದ್ದ. ವಿಚ್ಚೇಧನ ಪಡೆಯವುದಕ್ಕೂ ಬಿಟ್ಟಿರಲಿಲ್ಲ. ನಿನ್ನನ್ನು ಸುಖವಾಗಿ ಇರಲಾರದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಹಾಗಾಗಿ ನನ್ನ ಪ್ರಾಣರಕ್ಷಣೆಗಾಗಿ ಈ ಕೊಲೆ ಮಾಡಿದ್ದಾಗಿ ಕ್ರಿಸ್ಟಿನಾ ತಪ್ಪು ಒಪ್ಪಿಕೊಂಡಿದ್ದಾಳೆ.