Ad Widget .

ಮತ್ತೆ ಮುಂದುವರೆಯಲಿದೆಯಂತೆ ಅರ್ಧಕ್ಕೆ ನಿಂತ ಕನ್ನಡ ಬಿಗ್ ಬಾಸ್​ ಸೀಸನ್​ 8..!

ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಇದೇ ಕಾರಣದಿಂದಾಗಿ ಬಿಗ್​ ಬಾಸ್​ ಸೀಸನ್​ 8ನ್ನೂ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈಗ ಬಿಗ್​ ಬಾಸ್​ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಿಗ್ ಬಾಸ್​ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆಯಂತೆ.

Ad Widget . Ad Widget .

ಕನ್ನಡದ ಕಿರುತೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​​ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆಗಲೇ ಕಾರ್ಯಕ್ರಮ ಅರ್ಧಕ್ಕೆ ಕೊನೆಗೊಳ್ಳಲಿದೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಯಿತು. ಮಾತ್ರವಲ್ಲದೆ ಈ ವಿಚಾರ ವೀಕ್ಷಕರಿಗೆ ತುಂಬಾ ನಿರಾಸೆ ಮೂಡಿಸಿತ್ತು. ಕೊರೋನಾ ಆರ್ಭದ ನಡುವೆಯೂ ಬಿಗ್​ ಬಾಸ್​ ಸೀಸನ್​ 8 ಪ್ರಸಾರವಾಗುತ್ತಿತ್ತು. ಯಾವುದೇ ಅಡ್ಡಿ ಆತಂಕ ಇಲ್ಲದೆ ಕಾರ್ಯಕ್ರಮವನ್ನು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಈ ಕಾರಣದಿಂದ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್​ಡೌನ್​ ಜಾರಿಗೆ ತರಲಾಯಿತು. ಈ ವೇಳೆ ಶೂಟಿಂಗ್​ ಮಾಡಲು ನಿಷೇಧ ಹೇರಿದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿತ್ತು.

Ad Widget . Ad Widget .

ಜೂನ್​ 20ರಿಂದ ಮತ್ತೆ ಬಿಗ್​ ಬಾಸ್ ಸೀಸನ್​ 8 ಮತ್ತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಗ್ ಬಾಸ್ ಬಿಸಿನೆಸ್ ಹೆಡ್ ಹೇಳಿದ್ದಾರೆ ಎಂಬ ಸುದ್ದಿಯೊಂದು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಮತ್ತೆ ಆರಂಭವಾಗಲಿರುವ ಶೋನಲ್ಲಿ ಸಾಕಷ್ಟು ಹೊಸತನ ಹಾಗೂ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದೂ ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *