Ad Widget .

ಆನ್ಲೈನ್ ನಲ್ಲಿ ಮಗು ಖರೀದಿಸಿದ ದಂಪತಿ | ಸಿಕ್ಕಿಬಿದ್ದಳು 1.5 ಲಕ್ಷಕ್ಕೆ ಡೆಲಿವರಿ ಕೊಟ್ಟ ಮಹಾತಾಯಿ

ಎಚ್.ಡಿ. ಕೋಟೆ: ಅಕ್ರಮವಾಗಿ ತನ್ನ ಕರುಳಕುಡಿಯನ್ನೇ ಹಣದಾಸೆಗೆ ಮಾರಾಟ ಮಾಡಿ ತಾಯಿಯೊಬ್ಬಳು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

Ad Widget . Ad Widget .

ಆನ್ಲೈನ್ ಮೂಲಕ ಗಿಡಮೂಲಿಕೆ ತೈಲ, ಕೇಶ ತೈಲ ಇತ್ಯಾದಿ ಮಾರಾಟ ಮಾಡುತ್ತಿದ್ದ ಹಾಸನ ಮೂಲದ ರೋಜಾ ಎಂಬಾಕೆಯೇ ಮಗು ಮಾರಾಟ ಮಾಡಿ ಸಿಕ್ಕಿ ಬಿದ್ದವಳು. ಆಕೆಗೆ ವ್ಯವಹಾರದ ಸಮಯದಲ್ಲಿ ಎಚ್ ಡಿ ಕೋಟೆ ಸಮೀಪದ ಟೈಗರ್‌ಬ್ಲಾಕ್‌ನ ನಿವಾಸಿಗಳಾದ ಅಂಬರೀಶ್‌ ಹಾಗೂ ಮಧುಮಾಲತಿ ದಂಪತಿಯ ಪರಿಚವಾಗಿದೆ. ಆಗಾಗ ರೋಜಾ ಬಳಿ ವ್ಯವಹಾರ ನಡೆಸುತ್ತಿದ್ದ ದಂಪತಿಗೆ 7 ತಿಂಗಳ ಹಿಂದೆ ಆಕೆಗೆ ಮಗುವಾದ ವಿಷಯ ತಿಳಿಯುತ್ತದೆ. ಆ ಬಳಿಕ ಪರಿಚಿತಳಾಗಿದ್ದ ರೋಜಾ ದಂಪತಿ ಬಳಿ ನನಗೆ ಗಂಡು ಮಗು ಇಷ್ಟವಿಲ್ಲ. ನಾನು ಹೆಣ್ಣುಮಗುವನ್ನು ಇಷ್ಟಪಟ್ಟಿದ್ದವಳು ಎಂದಿದ್ದಾಳೆ. ಆಗ ದಂಪತಿ ಮಗುವನ್ನು ತಮಗೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿದ ರೋಜಾ, ದಂಪತಿ ಬಳಿ ಒಂದೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮೊಬೈಲ್ ಮೂಲಕವೇ ಕೊಂಚ ಚೌಕಸಿ ಮಾಡಿದ ದಂಪತಿ ಕೊನೆಗೆ ಅನಿವಾರ್ಯವಾಗಿ ಒಪ್ಪಿದ್ದಾರೆ.

Ad Widget . Ad Widget .

ಅದಾಗಲೇ ಹಣ ಪಡೆದು ಮಗು ನೀಡಿದ್ದ ರೋಜಾ ಇತ್ತೀಚೆಗೆ ಮಗುವನ್ನು ವಾಪಸ್ ಕೊಡುವಂತೆ ದಂಪತಿ ಬಳಿ ಜಗಳಕ್ಕಿಳಿದಿದ್ದಾಳೆ. ನನಗೆ ಮಗು ಬೇಕೆಬೇಕೆಂದು ಅಂಬರೀಶ್‌-ಮಧು ದಂಪತಿ ಜೊತೆ ವಾಗ್ವಾದಕ್ಕಿಳಿದು ರಂಪಾಟ ನಡೆಸಿದಾಗ ಮಗು ವ್ಯಾಪಾರವಾದ ಪ್ರಕರಣ ಬೆಳಕಿಗೆ ಬಂದಿದೆ. ಮೊಬೈಲ್‌ನಲ್ಲಿ ಮಗು ಮಾರಾಟ ಮಾಡುವಾಗ ಹಣಕ್ಕೆ ಬೇಡಿಕೆಯೊಡ್ಡಿರುವ ಸಂಭಾಷಣೆಗಳು ದೊರೆತಿವೆ. ಮಗು ಮಾರಾಟ ಪ್ರಕ್ರಿಯೆಯಲ್ಲಿ ಹಣಕ್ಕಾಗಿ ಚೌಕಾಸಿ ನಡೆಸಿರುವುದು ಆಡಿಯೋದಲ್ಲಿ ಕಂಡುಬಂದಿದೆ.
ಈ ಮಗುವು ರೋಜಾಗೆ ಜನಿಸಿತ್ತೋ ಅಥವಾ ಯಾರದೋ ಮಗುವನ್ನು ತನ್ನ ಮಗುವೆಂದು ಹೇಳಿ ಮಾರಾಟ ಮಾಡಿದ್ದಾರೋ, ಇಲ್ಲವೇ ಇದರ ಹಿಂದೆ ಶಿಶು ಮಾರಾಟ ಜಾಲ ಇದೆಯೋ ಎಂಬ ಅನುಮಾನಗಳು ವ್ಯಕ್ತವಾಗಿವೆ. ಪ್ರಸ್ತುತ ಮಗು ಅಂಬರೀಶ್‌-ಮಧುಮಾಲತಿ ದಂಪತಿ ಬಳಿ ಇದೆ, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

Leave a Comment

Your email address will not be published. Required fields are marked *