ಮಂಗಳೂರು: ಮಾರಕ ಕಪ್ಪು ಶಿಲೀಂದ್ರ ಸೊಂಕಿಗೆ ಜಿಲ್ಲೆಯಲ್ಲಿ ಮತ್ತೆರಡು ಸಾವು ಸಂಭವಿಸಿದ್ದು ಮೂರು ಹೊಸ ಪ್ರಕರಣಗಳು ವರದಿಯಾಗಿದೆ.
ಮೃತಪಟ್ಟವರು ಮತ್ತು ಹೊಸದಾಗಿ ಸೋಂಕಿಗೊಳಗಾದ ವರು ಎಲ್ಲರೂ ಹೊರಜಿಲ್ಲೆಯವರಗಿದ್ದಾರೆ. ಪತ್ತೆಯಾದ ಮೂರು ಹೊಸ ಪ್ರಕರಣಗಳು ಉತ್ತರ ಕನ್ನಡ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗೆ ಸಂಬಂಧಿಸಿದ್ದಾಗಿವೆ. ಎಲ್ಲರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು ಈ ಹಿಂದೆ ಸೊಂಕಿಗೊಳಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ನಿನ್ನೆ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಚಿಕ್ಕಮಗಳೂರು ಮತ್ತು ಇನ್ನೊಬ್ಬರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದಾರೆ. ಮಂಗಳೂರಿನಲ್ಲಿ ಸದ್ಯ 54 ಕಪ್ಪು ಶಿಲೀಂಧ್ರದ ಸೋಂಕಿತರಿದ್ದಾರೆ. ಇದರಲ್ಲಿ 11 ಸ್ಥಳೀಯರು ಮತ್ತು 43 ಜನರು ಹೊರಜಿಲ್ಲೆಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ನಗರದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೆ ಕಪ್ಪು ಶಿಲೀಂದ್ರ ಕ್ಕೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿದೆ. ಇದರಲ್ಲಿ ಇಬ್ಬರು ದ.ಕ. ದವರು ಮತ್ತು ಉಳಿದವರು ಹೊರ ಜಿಲ್ಲೆಯವರು.