Ad Widget .

ಸೊಂಕಿತರಿಗೆ ಲಸಿಕೆಯ ಅಗತ್ಯವಿಲ್ಲ | ಅವೈಜ್ಞಾನಿಕ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ದಾರಿ: ಕೇಂದ್ರಕ್ಕೆ ತಜ್ಞರ ಎಚ್ಚರಿಕೆ

ದೆಹಲಿ: ಸರಿಯಾದ ಯೋಜನೆಯಿಲ್ಲದ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ಕಾರಣವಗಬಹುದು ಎಂದು ತಜ್ಞರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ಹಾಗು ಕೋವಿಡ್ ಸೊಂಕಿಗೊಳಗಾದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದು ಸಲಹೆ ನೀಡಿದೆ.

Ad Widget . Ad Widget .

ಸರಿಯಾದ ವೈಜ್ಞಾನಿಕ ರೀತಿ ಅನುಸರಿಸದೆ, ವಿವೇಚನಾ ರಹಿತವಾಗಿ ಮತ್ತು ಅಪೂರ್ಣವಾದ ಸಾಮೂಹಿಕ ಲಸಿಕೀಕರಣವು ರೂಪಾಂತರ ತಳಿಗಳ ಸೃಷ್ಟಿಗೆ ಪ್ರಚೋದನೆ ನೀಡುತ್ತದೆ ಎಂದು ತಜ್ಞ ವೈದ್ಯರ ಸಮಿತಿ ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ. ಏಮ್ಸ್‌ನ ವೈದ್ಯರು, ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು, ಸಾರ್ವಜನಿಕ ಆರೋಗ್ಯ ತಜ್ಞರನ್ನೊಳಗೊಂಡ ತಜ್ಞರ ಸಮಿತಿ ಈ ಎಚ್ಚರಿಕೆಯ ಸಂದೇಶ ರವಾನಿಸಿದೆ.

Ad Widget . Ad Widget .

ಈಗಾಗಲೇ ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ. ನೈಸರ್ಗಿಕವಾಗಿ ಸೋಂಕಿಗೊಳಗಾದ ನಂತರ ಲಸಿಕೆ ಪ್ರಯೋಜನಕಾರಿ ಎಂಬುದಕ್ಕೆ ಪುರಾವೆಗಳು ಲಭ್ಯವಾದ ನಂತರ ಈ ಕಾರ್ಯ ಕೈಗೊಳ್ಳಬಹುದು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಮಕ್ಕಳನ್ನೂ ಒಳಗೊಂಡಂತೆ ದೊಡ್ಡ ಜನಸಮುದಾಯಕ್ಕೆ ಲಸಿಕೆ ನೀಡುವ ಪ್ರಯತ್ನಗಳ ಬದಲಿಗೆ, ದುರ್ಬಲರಿಗೆ ಮತ್ತು ಸೋಂಕಿನ ಅಪಾಯವನ್ನು ಸ್ವಲ್ಪಮಟ್ಟಿಗೂ ಎದುರಿಸಲಾಗದವರಿಗೆ ಮೊದಲು ಲಸಿಕೆ ನೀಡಬೇಕು. ಇದೇ ಈ ಹೊತ್ತಿನ ಗುರಿಯಾಗಿರಬೇಕು ಎಂದು ತಜ್ಞರು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಎಲ್ಲಾ ವಯೋಮಾನದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ. ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳ ವರದಿಗಳು ಮತ್ತು ರೋಗದ ವಿರುದ್ಧ ಸೆಣಸುತ್ತಿರುವವರ ಅಭಿಪ್ರಾಯ ಪಡೆದು ಲಸಿಕೆ ಅಭಿಯಾನ ಕೈಗೊಳ್ಳವುದು ಉತ್ತಮ. ದೇಶದಲ್ಲಿ ಸದ್ಯ ಅಂಥ ಪರಿಸ್ಥಿತಿ ಎದುರಾಗಿದೆ ಎಂದು ತಜ್ಞರು ಹೇಳಿದ್ದಾರೆ. ಸದ್ಯ ರಾಷ್ಟ್ರವ್ಯಾಪಿ ತ್ವರಿತವಾಗಿ ಹರಡುತ್ತಿರುವ ಸೋಂಕನ್ನು ಸಾಮೂಹಿಕ ಲಸಿಕಾ ಅಭಿಯಾನವು ತಡೆಯುವುದಿಲ್ಲ. ಇದು ಧೀರ್ಘ ಕಾಲದಲ್ಲಿ ಸೊಂಕಿನ ನಿಯಂತ್ರಣಕ್ಕಷ್ಟೇ ಸಹಕಾರಿ ಎಂದು ವರದಿಯಲ್ಲಿ ಹೇಳಲಾಗಿದೆ.

Leave a Comment

Your email address will not be published. Required fields are marked *