Ad Widget .

ಬಿಎಸ್ ವೈ ಸಿಎಂ ಆದಾಗಲೆಲ್ಲ ರಾಜ್ಯಕ್ಕೆ ಸಂಕಷ್ಟ ಕಾಡುತ್ತಿದೆ: ಬಿಜೆಪಿ ಶಾಸಕ

ಚಿತ್ರದುರ್ಗ: ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯದ ಚುಕ್ಕಾಣಿ ಹಿಡಿದಾಗಲೆಲ್ಲ ರಾಜ್ಯಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಹೊಸದುರ್ಗ ಬಿಜೆಪಿ ಶಾಸಕ ಅಭಿಪ್ರಾಯ ಪಟ್ಟಿದ್ದಾರೆ.

Ad Widget . Ad Widget .

ಯಡಿಯೂರಪ್ಪ ಅತ್ಯುತ್ತಮ ನಾಯಕ, ಶ್ರಮಿಕ ರಾಜಕಾರಣಿ. ಅವರಿಗೆ ಯಾವ ದುರದೃಷ್ಟ, ಗ್ರಹಚಾರ ಇದೆಯೋ ನಮಗೆ ತಿಳಿಯದು. ಅವರು ರಾಜ್ಯದ ಮುಖ್ಯಮಂತ್ರಿ ಯಾದಾಗಲೆಲ್ಲ ರಾಜ್ಯದಲ್ಲಿ ಸಂಕಷ್ಟ ಎದುರಾಗುತ್ತದೆ. ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಬೇಸರ ವ್ಯಕ್ತಪಡಿಸಿದರು.

Ad Widget . Ad Widget .

ಹೊಸದುರ್ಗ ನಗರದ ಕಡು ಬಡವರಿಗೆ ಉಚಿತವಾಗಿ 6,500 ಆಹಾರ ಕಿಟ್ ವಿತರಿಸಿದ ಬಳಿಕ ಈ ಬಗ್ಗೆ ಮಾತನಾಡಿದ ಶಾಸಕ ಶೇಖರ್‌, ಕೆಲವರು ನಾನು ರಾಜ್ಯದ ಆಡಳಿತದ ನೇತೃತ್ವ ವಹಿಸಿಕೊಂಡರೆ ನಮ್ಮ ಹಣೆ ಬರಹವೇ ಬದಲಾಗುತ್ತದೆ ಎಂಬ ಕನಸು ಕಾಣುತ್ತಾರೆ. ಆದರೆ ನಮ್ಮ ಬಿ.ಎಸ್. ಯಡಿಯೂರಪ್ಪನವರು ರಾಜ್ಯದ ಉನ್ನತಿಯ ಕನಸು ಕಾಣುತ್ತಾರೆ. ಯಡಿಯೂರಪ್ಪ ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಎಲ್ಲೆಡೆ ನೆರೆ ಹಾವಳಿಯ ಸಂಕಷ್ಟ ಉಂಟಾಗಿತ್ತು. ಆ ಸಂದರ್ಭದಲ್ಲಿ ಅವರು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದರು. ಈ ಬಾರಿ ಕೋವಿಡ್ ಸಂಕಷ್ಟ ಉಂಟಾಗಿದೆ. ಆದರೆ ಬಿಎಸ್‌ವೈ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಅನಾವಶ್ಯಕವಾಗಿ ನಾಯಕತ್ವ ಬದಲಾವಣೆಯ ಪ್ರಯತ್ನ ನಡೆಯುತ್ತಿದೆ. ನನ್ನ ಮಾತಿಗೆ ಕವಡೆ ಕಿಮ್ಮತ್ತಿಲ್ಲ ಮತ್ತು ಬಿಜೆಪಿಯ ಎಲ್ಲಾ ಸಿದ್ಧಾಂತ ಒಪ್ಪಲು ಬಲು ಕಷ್ಟ ಎಂದು ಶಾಸಕ ಅಭಿಪ್ರಾಯಪಟ್ಟರು.

Leave a Comment

Your email address will not be published. Required fields are marked *