Ad Widget .

ಬೆಂಗಳೂರು ವಿಷಯದಲ್ಲಿ ನನಗೆ ಭಯ ಎದುರಾಗಿದೆ ಎಂದ ಸುಧಾಕರ್ | ತುರಾತುರಿಯಲ್ಲಿ ಸಿಲಿಕಾನ್ ಸಿಟಿ ಅನ್ಲಾಕ್ ಅಗತ್ಯವಿತ್ತೆ…?

ಬೆಂಗಳೂರು: ಅನ್ಲಾಕ್ ಆಯಿತೆಂದು ಸ್ವಲ್ಪ ಯಾಮಾರಿದರೂ ಅಪಾಯ ಖಚಿತ. ಬೆಂಗಳೂರಿನ ಪರಿಸ್ಥಿತಿ ಕಂಡರೆ ನನಗೂ ಭಯವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

Ad Widget . Ad Widget .

ಕಳೆದ ಒಂದುವರೆ ತಿಂಗಳ ಹಿಂದೆ ಕರುನಾಡಿಗೆ ಹಾಕಿದ್ದ ಬೀಗ ತೆರೆಯಲಾಗಿದೆ. ನಿನ್ನೆ ಸಿಎಂ ಯಡಿಯೂರಪ್ಪ 11 ಜಿಲ್ಲೆಗಳನ್ನು ಹೊರತುಪಡಿಸಿ, ಈ ತಿಂಗಳ 21ರಿಂದ ರಾಜ್ಯವನ್ನು ಅನ್ಲಾಕ್ ಗೊಳಿಸುವ ನಿರ್ಧಾರ ಕೈಗೊಂಡಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಾರದ 11 ಜಿಲ್ಲೆಗಳಲ್ಲಿ ಮುಂದಿನಂತೆ ನಿರ್ಬಂಧ ಮುಂದುವರಿಸಲು ಆದೇಶಿಸಲಾಗಿತ್ತು. ಆದರೆ ಬೆಂಗಳೂರು ನಗರವನ್ನು ಅನ್ಲಾಕ್ ಮಾಡಿರುವುದು ಆಶ್ಚರ್ಯ ಮೂಡಿಸಿತ್ತು. ಸಾಕಷ್ಟು ಜನಸಂಖ್ಯೆ ಇರುವ ಬೆಂಗಳೂರನ್ನು ಇಷ್ಟು ಬೇಗ ಅನ್ಲಾಕ್ ಮಾಡುವ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡಿತ್ತು.

Ad Widget . Ad Widget .

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್. ಲಾಕ್ ಆಗಿದೆಯೆಂದು ಅನಗತ್ಯ ಸಂಚಾರ ಬೇಡ. ಶೇಕಡ 70ಕ್ಕಿಂತ ಹೆಚ್ಚು 2 ಡೋಸ್ ವಾಕ್ಸಿನೇಶನ್ ಆಗುವವರಿಗೆ ಬೆಂಗಳೂರಿನ ಜನರು ನಿರ್ಲಕ್ಷ್ಯ ವಹಿಸಬಾರದು. ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ ಎಂದಿದ್ದಾರೆ. ರಾಜ್ಯ ಆರ್ಥಿಕವಾಗಿ ಕುಸಿತಕಂಡಿದ್ದು, ಉದ್ಯೋಗ ವಿಲ್ಲದೆ ಸಂಕಷ್ಟ ಅನುಭವಿಸಸುತ್ತಿರುವ ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನಹರಿಸಿ ಅನ್​​ಲಾಕ್​ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸುಧಾಕರ್​​ ಹೇಳಿದ್ದಾರೆ.

Leave a Comment

Your email address will not be published. Required fields are marked *