Ad Widget .

ಮನೆಯಿಂದ ಕೇವಲ 100 ಮೀ. ದೂರದಲ್ಲಿದ್ದಳು ಅಂದು ನಾಪತ್ತೆಯಾಗಿದ್ದ ಯುವತಿ | ಪ್ರೇಯಸಿಯ ಹತ್ತು ವರ್ಷಗಳಿಂದ ತನ್ನ ಮನೆಯಲ್ಲಿಯೇ ಕೂಡಿಹಾಕಿದ್ದನು ಭಗ್ನಪ್ರೇಮಿ

ಕೇರಳ: ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮನೆಮಗಳು ಅಂದಿನಿಂದಲೂ ಇಂದಿನವರೆಗೆ ಮನೆಯ ಬಳಿಯೇ ಯಾರಿಗೂ ತೋಚದೆ ಇದ್ದಳೆಂದರೆ ಹೇಗಾಗಬೇಡ ಹೇಳಿ. ಇಂತಹದೊಂದು ಅಚ್ಚರಿಯ ಘಟನೆ ಪಕ್ಕದ ಕೇರಳ ರಾಜ್ಯದಲ್ಲಿ ನಡೆದಿದ್ದು ಎಲ್ಲರನ್ನು ನಿಬ್ಬೆರಾಗಗುವಂತೆ ಮಾಡಿದೆ.

Ad Widget . Ad Widget .

ಪಾಲಕ್ಕಾಡ್ ಜಿಲ್ಲೆಯ ಅರಿಯೂರ್ ಬಳಿಯ ಕರೈಕ್ಕಟ್ಟುಪರಂಬು ಎಂಬ ಪುಟ್ಟ ಗ್ರಾಮದಲ್ಲಿ ಯುವಕನೋರ್ವ ಕುಟುಂಬಸ್ಥರು, ನೆರೆಹೊರೆಯವರಿಗೆ ಒಂದು ಸಣ್ಣ ಸುಳಿವೂ ಸಿಗದಂತೆ ಬರೋಬ್ಬರಿ 10 ವರ್ಷಗಳ ಕಾಲ ತನ್ನ ಪ್ರೇಯಸಿಯನ್ನು ಮನೆಯಲ್ಲೇ ಕೂಡಿಹಾಕಿಕೊಂಡಿದ್ದ. ಈ ಗ್ರಾಮದಲ್ಲಿ ಮನೆಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಈ ಭಗ್ನಪ್ರೇಮಿಯ ಕೆಲಸ ಯಾರಿಗೂ ಗೊತ್ತೇ ಆಗಿರಲಿಲ್ಲ. 10 ವರ್ಷದ ಹಿಂದೆ ಕರೈಕ್ಕಟ್ಟುಪರಂಬು ಗ್ರಾಮದ 19 ವರ್ಷದ ಯುವತಿ ನಾಪತ್ತೆಯಾಗಿದ್ದಳು. ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಕೆಲ ವರ್ಷಗಳ ಕಾಲ ಮಗಳಿಗಾಗಿ ಹುಡುಕಿದ್ದ ಪೋಷಕರು ತಮ್ಮ ಪ್ರಯತ್ನ ನಿಲ್ಲಿಸಿದ್ದು, ಪೊಲೀಸರು ತನಿಖೆ ಅಂತ್ಯಗೊಳಿಸಿದ್ದರು. ಆದರೆ ದಶಕದ ಬಳಿಕ ಈ ನಾಪತ್ತೆ ಪ್ರಕರಣಕ್ಕೆ ಸಿನಿಮೀಯ ರೀತಿಯ ಕ್ಲೈಮ್ಯಾಕ್ಸ್ ಟ್ವಿಸ್ಟ್ ಸಿಕ್ಕಿದೆ.

Ad Widget . Ad Widget .

ನಾಪತ್ತೆಯಾಗಿದ್ದ ಯುವತಿ ಹಾಗೂ ನೆರೆಮನೆಯ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದರಿಂದ ಕುಟುಂಬಸ್ಥರು ಅವರ ಪ್ರೀತಿಯನ್ನು ಒಪ್ಪಲಿಕ್ಕಿಲ್ಲ ಎಂಬ ಅನುಮಾನ ಕಾಡಿತ್ತು. ದಿಕ್ಕು ತೋಚದಂತಾದ ಯುವಕ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಸಣ್ಣ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ. ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಕೆಲವು ದಿನಗಳಲ್ಲೇ ಮದುವೆಯಾಗಬೇಕು ಎಂದ ಯೋಚಿಸಿದ್ದ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಹಾಗೂ ಹೊರಗಡೆ ವಿಚಾರ ಬೆಳಕಿಗೆ ಬಂದರೆ ತಾನು ಎದುರಿಸಬೇಕಾದ ತೊಂದರೆಗಳನ್ನು ಊಹಿಸಿಕೊಂಡು ಭಯಭೀತನಾಗಿ 10 ವರ್ಷಗಳ ಕಾಲ ಇದನ್ನು ರಹಸ್ಯವಾಗಿಯೇ ಇಟ್ಟಿದ್ದನು.

ಯುವಕ ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ತಾನೇನೆ ಮಾಡಿದರೂ ಮನೆಯವರು ನನ್ನನ್ನು ಪ್ರಶ್ನಿಸಬಾರದೆಂದು ಮಾನಸಿಕ ಅಸ್ವಸ್ಥನಂತೆ ವರ್ತಿಸಲು ಆರಂಭಿಸಿದ್ದಾನೆ. ಇದರಿಂದ ಕುಟುಂಬಸ್ಥರೂ ಹೆದರಿ ಅವರ ಕೋಣೆಯೊಳಗೆ ಯಾರೂ ಸುಳಿಯುತ್ತಿರಲಿಲ್ಲ. ಸ್ನೇಹಿತರೊಂದಿಗೂ ಬೆರೆಯುವುದನ್ನು ನಿಲ್ಲಿಸಿದ್ದ ಆತ ಕೆಲಸಕ್ಕೆ ಮಾತ್ರ ಹೊರಗೆ ತೆರಳುತ್ತಿದ್ದ.
ಉಳಿದ ಸಮಯ ಕೊಣೆಯಲ್ಲಿ ಪ್ರೇಯಸಿಯೊಂದಿಗೆ ಕಳೆಯುವುದು ಈತನ ದಿನಚರಿಯಾಗಿತ್ತು.
ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ ಮೇಲೆ ಕೋಣೆಯ ಕಿಟಕಿ ಮೂಲಕ ಯುವತಿಯನ್ನು ಸ್ನಾನಗೃಹ, ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದನು. ತನಗೆಂದು ಊಟ ತೆಗೆದುಕೊಂಡು ಕೋಣೆಯೊಳಗೆ ಹೋಗಿ ಆಕೆಗೆ ನೀಡುತ್ತಿದ್ದನು. ಯುವತಿ ಪ್ರಿಯತಮನ ಮನೆಯಿಂದಲೇ ನೆರೆಮನೆಯಲ್ಲಿದ್ದ ತನ್ನ ತಂದೆ ಮತ್ತು ತಾಯಿಯನ್ನು ಕಿಟಕಿ ಮೂಲಕವೇ ನೋಡುತ್ತಿದ್ದಳು.

ಬರೋಬ್ಬರಿ ಹತ್ತು ವರ್ಷಗಳನ್ನು ಹೀಗೇ ಕಳೆದಿದ್ದ ಜೋಡಿ ತಿಂಗಳ ಹಿಂದೆ ಪರಾರಿಯಾಗಿ ವಿವಾಹವಾಗಿದ್ದಾರೆ. ಬಳಿಕ ಸ್ವಲ್ಪ ದೂರದ ಗ್ರಾಮದಲ್ಲಿ ವಾಸ ಮಾಡಲು ಶುರು ಮಾಡಿದ್ದರು. ಮಗ ಕಾಣೆಯಾದನೆಂದು ಯುವಕನ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಿರುವಾಗ ಇತ್ತೀಚೆಗೆ ಯುವಕ ಆತನ ಸಹೋದರನ ಕಣ್ಣಿಗೆ ಬಿದ್ದಿದ್ದಾನೆ. ಬಳಿಕ ವಿಷಯ ಎಲ್ಲರಿಗೂ ತಿಳಿದಿದ್ದು, ಜೋಡಿಯನ್ನು ಪೊಲೀಸರು ವಿಚಾರಣೆಗೆ ಕರೆಯಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಪ್ರೇಮಿಗಳಿಬ್ಬರೂ ಸತ್ಯ ಬಾಯ್ಬಿಟ್ಟಿದ್ದು, 10 ವರ್ಷಗಳ ನಂಬಲಾಗದ ಕಥೆಯನ್ನು ಕೇಳಿ ಕುಟುಂಬಸ್ಥರು, ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

Leave a Comment

Your email address will not be published. Required fields are marked *