Ad Widget .

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ

ಉಡುಪಿ: 80ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡವನ್ನೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದ ಶೇಖರ್ ಪದ್ದು ಬಂಗೇರ (75ವ.) ಇಂದು ಮೃತಪಟ್ಟಿದ್ದಾರೆ.

Ad Widget . Ad Widget .

ಜಿಲ್ಲೆಯ ಬಡಾನಿಡಿಯೂರು ಮೂಲದವರಾದ ಅವರಿಗೆ ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Ad Widget . Ad Widget .

ಭಾರತ ತಂಡದಲ್ಲಿ ಗೋಲ್ಕೀಪರ್ ಹಾಗೂ ನಾಯಕನಾಗಿದ್ದ ಇವರು ದೇಶಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಹಾಗೂ ಹಲವಾರು ಪ್ರತಿಷ್ಠಿತ ಫುಟ್ ಬಾಲ್ ಕ್ಲಬ್ ಗಳಲ್ಲಿ ತರಬೇತುದಾರನಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಾವಿನ ಸುದ್ದಿ ತಿಳಿದು ಫುಟ್ಬಾಲ್ ವಲಯ ಕಂಬನಿ ಮಿಡಿದಿದೆ.

Leave a Comment

Your email address will not be published. Required fields are marked *