ಕಂದಮ್ಮನಿಗೆ ಕೇಬಲ್ ನಿಂದ ಹೊಡೆದು ಕೊಂದ ಕ್ರೂರಿ ತಂದೆ-ತಾಯಿ

ಆಂಧ್ರಪ್ರದೇಶ: ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಮ್ಮ ಕರುಳ ಕುಡಿಗೆ ಕೇಬಲ್ ನಿಂದ ಹೊಡೆದ ಪರಿಣಾಮ ಮಗು ಮೃತಪಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

Ad Widget ... ..

ಮೂರು ವರ್ಷದ ಮಗು ಉಮೇಶ ಮೃತಪಟ್ಟ ದುರ್ದೈವಿ. ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಂದೆ-ತಾಯಿ ಇಬ್ಬರೂ ಸೇರಿಕೊಂಡು ವಯರ್ ಕೇಬಲ್ ನಿಂದ ಒಂದೇ ಸಮನೆ ಮಗುವಿಗೆ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ಅವರೇ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಹಾಗೂ ಮೃತಪಟ್ಟಿದೆ ಎಂದಿದ್ದಾರೆ. ಈ ಮಗು ದಂಪತಿಗೆ ಇಷ್ಟವಿರಲಿಲ್ಲ. ಆದ್ದರಿಂದ ಆಗಾಗ ಸುಖಾಸುಮ್ಮನೆ ಮಗುವಿಗೆ ಥಳಿಸುತ್ತಿದ್ದರು ಎಂದು ನೆರೆಹೊರೆಯ ಮನೆ ಮಂದಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಕ್ರೂರಿ ತಂದೆ-ತಾಯಿಯನ್ನು ವಶಕ್ಕೆ ಪಡೆದಿದ್ದಾರೆ.

Ad Widget

Leave a Comment

Your email address will not be published. Required fields are marked *