Ad Widget .

ಜೂ.14ರ ಬಳಿಕ ಎಲ್ಲವೂ ಅನ್ ಲಾಕ್ ಆಗಲ್ಲ, ರಿಲೀಫ್ ‌ಮೂಡ್ ನಲ್ಲಿದ್ದ ರಾಜ್ಯದ ಜನತೆಗೆ ಶಾಕ್

Ad Widget . Ad Widget .

ಬೆಂಗಳೂರು : ರಾಜ್ಯದಲ್ಲಿ ಜೂನ್ 14ರವರೆಗೆ ಜಾರಿಗೊಳಿಸಿರುವಂತ ಲಾಕ್ ಡೌನ್, ಕೂಡಲೇ ಏಕಾಏಕಿ ತೆರವಾಗೋದಿಲ್ಲ. ಬದಲಾಗಿ, ಐದು ಹಂತಗಳಲ್ಲಿ ಅನ್ ಲಾಕ್ ಆಗಲಿದೆ. ಮೊದಲ ಹಂತದಲ್ಲಿ ಖರೀದಿಯ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಕುರಿತಂತೆ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕೂಡಲೇ ಜೂನ್ 14ರ ನಂತರ ಅನ್ ಲಾಕ್ ಮಾಡೋದಿಲ್ಲ. ಬದಲಾಗಿ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಐದು ಹಂತಗಳಲ್ಲಿ ಅನ್ ಲಾಕ್ ಮಾಡುವ ಚಿಂತನೆ ಮಾಡಲಾಗಿದೆ. ಮೊದಲ ಹಂತದಲ್ಲಿ ಖರೀದಿಯ ಅವದಿಯನ್ನು 12 ಗಂಟೆಯವರೆಗೆ ವಿಸ್ತರಿಸುವ ಚಿಂತನೆ ಇದೆ ಎಂದರು.

Ad Widget . Ad Widget .

ಇನ್ನೂ ಪಾರ್ಕ್ ಗಳಲ್ಲಿ ವಾಕಿಂಗ್ ಮಾಡೋದಕ್ಕೆ ಅವಕಾಶ ನೀಡಬಹುದು ಎಂಬುದಾಗಿ ತಜ್ಞರು ಸೂಚಿಸಿದ್ದಾರೆ. ಹೀಗಾಗಿ ಅನ್ ಲಾಕ್ ಮೊದಲ ಹಂತದಲ್ಲಿಯೇ ಪಾರ್ಕ್ ನಲ್ಲಿ ವಾಕಿಂಗ್ ಮಾಡೋದಕ್ಕೂ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜೂನ್.14ರ ನಂತ್ರ ಹಂತ ಹಂತವಾಗಿ ಅನ್ ಲಾಕ್ ಜಾರಿಗೊಳಿಸೋ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *