ಕಾಮೋತ್ತೇಜಕ ಮಾತ್ರೆ ನೀಡಿ ಅಪ್ರಾಪ್ತೆಯ ಮೇಲೆ ನಿರಂತರ 8 ವರ್ಷ ಅತ್ಯಾಚಾರ | ಕಾಮುಕ ದಂಪತಿ ಸೇರಿದಂತೆ ನಾಲ್ವರ ಬಂಧನ

ಮುಂಬೈ: ಪಿಯುಸಿ ವಿದ್ಯಾರ್ಥಿನಿಯೋರ್ವಳಿಗೆ ಕಾಮೋತ್ತೇಜಕ ಮಾತ್ರೆ ಮತ್ತು ಇಂಜೆಕ್ಷನ್ ಗಳನ್ನು ನೀಡಿ ನಿರಂತರ 8 ವರ್ಷಗಳ ಕಾಲ ಅತ್ಯಾಚಾರ ವೆಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.

Ad Widget ... ..

ಸಂತ್ರಸ್ತೆಗೆ ಸುಮಾರು 16 ವರ್ಷ ಪ್ರಾಯವಾಗಿದ್ದು, ಅಂದೇರಿಯ ವ್ಯಾಪಾರಿಯೋರ್ವರ ಮಗಳಾಗಿದ್ದಾಳೆ. ತನ್ನ ನೆರೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಕುಟುಂಬದ ವ್ಯಕ್ತಿ ಸಂತ್ರಸ್ತೆಯ ಮೇಲೆ ಅ‍ತ್ಯಾಚಾರವೆಸಗಿದ್ದಾನೆ. ಸುಮಾರು 8 ವರ್ಷಗಳ ಹಿಂದೆ ಬಾಲಕಿಗೆ ಕಾಮೋತ್ತೇಜಕ ಮಾತ್ರೆಯನ್ನು ನೀಡಿದ್ದಾನೆ. ನಂತರ ಆಕೆಯನ್ನ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ.

Ad Widget

ನಂತರದಲ್ಲಿ ನಿರಂತರವಾಗಿ ಬಾಲಕಿಗೆ ಕಾಮೋತ್ತೇಜಕ ಮಾತ್ರೆ ಹಾಗೂ ಇಂಜೆಕ್ಷನ್ ಗಳನ್ನು ನೀಡಿದ್ದಾನೆ. ಯುವತಿಯ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಪತ್ನಿ ಕೂಡ ಸಾಥ್ ಕೊಟ್ಟಿದ್ದಾಳೆ. ಇದೀಗ ಯುವತಿ ಪೋಷಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮುಕ ದಂಪತಿ ಹಾಗೂ ಯುವತಿಯ ಚಿಕ್ಕಪ್ಪ ಹಾಗೂ ಆತನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *