Ad Widget .

ಮಂಗಳೂರು: ಕಟೀಲ್ ಸಂದರ್ಶನದ ಆಡಿಯೋ ತಿರುಚಿದ ಪ್ರಕರಣ | ಸಾಮಾಜಿಕ ಕಾರ್ಯಕರ್ತ ಅರೆಸ್ಟ್

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗಿನ ಸಂದರ್ಶನ ಒಂದರ ಆಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಖಾಸಗಿ ಟಿವಿ ಚಾನೆಲೊಂದು ಸಂದರ್ಶನ ನಡೆಸಿತ್ತು. ಸಂದರ್ಶನದಲ್ಲಿ ವೀಕ್ಷಕರಿಗೆ ಸಂಸದರೊಂದಿಗೆ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಲಾಗಿತ್ತು. ಹಾಗೆ ಪ್ರೇಕ್ಷಕರೊಬ್ಬರು ಪ್ರಶ್ನೆ ಕೇಳಿದ ವಿಡಿಯೋ ತುಣುಕೊಂದನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುನಿಲ್ ಬಂಧನವಾಗಿದೆ. ಸುನಿಲ್ ಸಂದರ್ಶನದ ವಿಡಿಯೋ ತೆಗೆದು ಅದಕ್ಕೆ ಚಿಕ್ಕಮಗಳೂರು ಮೂಲದ ಯುವತಿ ಒಬ್ಬಳು ಅವಾಚ್ಯವಾಗಿ ನಿಂದಿಸುವ ಆಡಿಯೋ ಎಡಿಟ್ ಮಾಡಿ ಹರಿಯಬಿಡಲಾಗಿತ್ತು. ಸದ್ಯ ಆ ವಿಡಿಯೋ ಭಾರಿ ವೈರಲ್ ಆಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸುನಿಲ್ ವಿರುದ್ಧ ಪ್ರಕರಣ ದಾಖಲಾಗಿ ಇದೀಗ ಅವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

Ad Widget . Ad Widget .

Leave a Comment

Your email address will not be published. Required fields are marked *