ಮಂಗಳೂರು: ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿಯಲ್ಲಿ ನಡೆದಿದೆ.

ಕದ್ರಿ ಪಿಂಟೋ ಲೇನ್ ನಿವಾಸಿ ಸುರೇಶ್ 55 ಮತ್ತು ಪತ್ನಿ ವಾಣಿಶ್ರೀ ಆತ್ಮಹತ್ಯೆ ಮಾಡಿಕೊಂಡವರು.

ಇಂದು ಬೆಳಿಗ್ಗೆ ಸುರೇಶ್ ಅವರ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಹಾಗೂ ಪತ್ನಿಯ ಮೃತದೇಹ ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡೆತ್ ನೋಟ್ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.