Ad Widget .

ನಮ್ ಸಿಎಮ್ಮೂ ನಗ್ತಾರೆ ಗೊತ್ತಾ? ಅವ್ರ ಮುಖದಲ್ಲಿ ನಗು ಹರಿಸಿದಾಕೆ ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…

Ad Widget . Ad Widget .

ಬೆಂಗಳೂರು: ಸದಾ ಬಿಗಿದ ಮೊಗ, ಗಂಟಿಕ್ಕಿದ ಹುಬ್ಬು. ಯಾವಾಗಲೋ ಒಮ್ಮೆ ನಸುನಗು. ಇಷ್ಟು ಹೇಳಿದರೆ ಸಾಕು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖದರ್ಶನವಾಗಿ ಬಿಡುತ್ತದೆ. ಯಡಿಯೂರಪ್ಪ ಏನೇ ಆದ್ರೂ ನಗಲ್ಲ ಅಂತ ಹಲವರು ಅಂದ್ಕೊಂಡಿದಾರೆ. ಆದ್ರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇವತ್ತೊಂದು ಘಟನೆ ನಡೆಯಿತು.
ಎಲ್ಲರ ಭಾವನೆಗಳಿಗೆ ತದ್ವಿರುದ್ಧವಾಗಿ ಮನಸಾರೆ ನಕ್ಕು, ಉಳಿದವರನ್ನು ಸಂತಸದ ಅಲೆಯಲ್ಲಿ ತೇಲಿಸಿದ ಸಿಎಂ ಬಿಎಸ್ ವೈ ಬುಧವಾರ ಕಂಡರು.

Ad Widget . Ad Widget .

ಅಷ್ಟಕ್ಕೂ ಇಂಥದ್ದೊಂದು ಅನಿರೀಕ್ಷಿತ ಬೆಳವಣಿಗೆಗೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಆ ಘಟನೆ…

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಇತ್ತು. ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಸಿಎಂ ಬಿಎಸ್ ವೈ ವಿಡಿಯೋ ಸಂವಾದ ನಡೆಸಿದರು. ಯಡಿಯೂರಪ್ಪ ಅವರೊಂದಿಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾತನಾಡುವಾಗ ಮುಖ್ಯಮಂತ್ರಿಯ ಜತೆಗೆ ಮಾತನಾಡುತ್ತಿರುವುದನ್ನು ಊಹಿಸಿಕೊಳ್ಳಲೂ ಆಗದೇ, ‘ನಿಮ್ಮ ಜತೆ ನಾನು ಮಾತಾಡೋದಾ..!’
ಯಡಿಯೂರಪ್ಪ ಸಾಹೇಬ್ರೆ ನನಗೆ ಖುಷಿ ಆಗ್ತಿದೆ’ ಅಂದ್ರಂತೆ.‌ ಆಗ ಯಡಿಯೂರಪ್ಪ ಮನತುಂಬಿ ನಗುವ ಮೂಲಕ ‘ಹೇಳಮ್ಮಾ ಏನ್ ಸಮಾಚಾರ?’ ಅಂತಾ ಕೇಳಿದರು. ಆಗಲೇ ಈ ನಗುಮೊಗದ ಸಿಎಂ ಆಗಿ ಕಂಡರು. ಹೀಗೆ ಹೇಳುವ ಮೂಲಕ ಅಂಗನವಾಡಿ ಕಾರ್ಯಕರ್ತೆಗೆ ಮಾತನಾಡಲು ಧೈರ್ಯ ತುಂಬಿದರು ಎಂದು ಮೂಲಗಳು ತಿಳಿಸಿವೆ.
ಅವರವರ ಬ್ಯುಸಿ ಶೆಡ್ಯೂಲ್ ನಲ್ಲಿ ನಕ್ಕು ಹಗುರಾದ ಸಿಎಂ ನ ನೋಡಿ ಹಲವು‌ ಮಂದಿ ನಮ್ ಸಿಎಮ್ಮೂ ನಗ್ತಾರೆ ಎಂದ್ರಂತೆ.

Leave a Comment

Your email address will not be published. Required fields are marked *