ಹೈಕೋರ್ಟ್ ಮೆಟ್ಟಿಲೇರಿದ ಕಳೆದ ಬಾರಿ ನಪಾಸಾದ ಪಿಯುಸಿ ವಿದ್ಯಾರ್ಥಿಗಳು

ಬೆಂಗಳೂರು: ನಮಗೆ ಮಾತ್ರ ಪರೀಕ್ಷೆ ಏಕೆ..? ಮಾಡುವುದಾದರೆ ಎಲ್ಲರಿಗೂ ಮಾಡಿ ಅಥವಾ ನಮ್ಮ ಎಕ್ಸಾಮ್ ರದ್ದು ಮಾಡಿ, ಎನ್ನುತ್ತಾ ಕಳೆದ ಬಾರಿ ಪಿಯುಸಿ ಫೇಲ್ ಆಗಿದ್ದ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Ad Widget ... ..

ಕೋವಿಡ್ ಎರಡನೆಯ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯ ರದ್ದುಮಾಡಿ ಕಳೆದವಾರ ಆದೇಶ ಹೊರಡಿಸಿತ್ತು. ಈ ಬಾರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪ್ರಥಮ ಪಿಯುಸಿ ಅಂಕ ಹಾಗೂ ಎಸೆಸೆಲ್ಸಿ ಅಂಕಗಳ ಆಧಾರಿತವಾಗಿ ತೇರ್ಗಡೆ ಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕಳೆದ ಬಾರಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಿತರಾದ ರಿಪೀಟರ್ಸ್ ಪರವಾಗಿ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

Ad Widget

ಎಸ್.ವಿ.ಸಿಂಗ್ರೇಗೌಡ ಎಂಬುವವರ ಪರವಾಗಿ ವಕೀಲರಾದ ಆರ್.ಪಿ.ಸೋಮಶೇಖರಯ್ಯ ಹಾಗೂ ಆರ್.ಎಲ್.ರಂಗ ಸ್ವಾಮ್ಯ ಅವರು ಅರ್ಜಿ ಸಲ್ಲಿಸಿದ್ದಾರೆ. ರಿಪೀಟರ್ಸ್‌ ವಿದ್ಯಾರ್ಥಿಗಳು ಸುಮಾರು 95 ಸಾವಿರ ಇದ್ದು, ಅವರಿಗೆ ಸರ್ಕಾರದ ಈ ದ್ವಂದ್ವ ನಿಲುವಿನಿಂದ ತೊಂದರೆಯಾಗಿದೆ. ರೆಗ್ಯುಲರ್‌ ವಿದ್ಯಾರ್ಥಿಗಳಿಗೆ ಒಂದು ನ್ಯಾಯ, ರಿಪೀಟರ್ಸ್‌ಗೆ ಇನ್ನೊಂದು ನ್ಯಾಯ ಏಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

Leave a Comment

Your email address will not be published. Required fields are marked *