Ad Widget .

ಕೂಲಿ ಕಸಿದುಕೊಂಡ ಪದ್ಮಶ್ರಿ ಪುರಸ್ಕಾರ: ಪ್ರಶಸ್ತಿ ಬಂದ ಬಳಿಕ ಬದುಕೋದೇ ಇವ್ರಿಗೆ ಕಷ್ಟವಾಗ್ತಿದೆ

ಒರಿಸ್ಸಾ: ಪದ್ಮಶ್ರಿ ಪ್ರಶಸ್ತಿ ಸಿಕ್ಕಿದ ಬಳಿಕ ಕೂಲಿ ಕೆಲಸಕ್ಕೆ ಕೂಡ ನನ್ನನ್ನು ಯಾರೂ ಕರೆಯಿತ್ತಿಲ್ಲ. ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲ, ಎಂದು ಪದ್ಮಶ್ರೀ ಪುರಸ್ಕೃತರೋರ್ವರು ಹೇಳಿದ್ದು, ಇದೀಗ ಎಲ್ಲೆಡೆ ಸುದ್ದಿಯಾಗ್ತಿದೆ. ಹೌದು. ಇವರು ಒರಿಸ್ಸಾದ ಬಡರೈತ ದೈತಾರಿ ನಾಯಕ್. ಕೇಂದ್ರ ಸರಕಾರ ಕೊಟ್ಟ ಪದ್ಮಶ್ರಿ ಪ್ರಶಸ್ತಿ ಬಳಿಕ ಇವರ ಬಾಳು ಬೀದಿಪಾಲಾಗಿದೆ.

Ad Widget . Ad Widget .

ದೈತಾರಿ ನಾಯಕ್ ಒರಿಸ್ಸಾದಲ್ಲಿ 3 ಕಿ,ಮೀ ಗುಡ್ಡವನ್ನು ಅಗೆದು ಸುರಂಗವನ್ನು ಕೊರೆದು ಜನರ ಜಮೀನಿಗೆ ನೀರು ತಂದಿದ್ದರು. ಊರಿನ ಜನರ ಬಾಳನ್ನು ಬೆಳಗಿಸಿದ ಇವರಿಗೆ ಕೇಂದ್ರ ಸರಕಾರ ಪದ್ಮಶ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಶಸ್ತಿ ಪಡೆದ ಬಳಿಕ ಎಲ್ಲರಿಗೂ ಇವರ ಮೇಲೆ ಗೌರವ. ಆದರೆ ದಿನಗೂಲಿ ಮಾಡಿ ಹೊಟ್ಟೆ ತುಂಬಿಸುತ್ತಿದ್ದ ಇವರನ್ನು ಜನರು ಕೆಲಸಕ್ಕೆ ಮಾತ್ರ ಕರೆಯುತ್ತಿಲ್ಲ. ದೊಡ್ಡ ಮನುಷ್ಯರನ್ನು ಹೇಗೆ ನಮ್ಮ ಜಮೀನಿನಲ್ಲಿ ಕೆಲಸಕ್ಕೆ ಕರೆಯುವುದೆಂಬ ಮುಜುಗರ. ಇದರಿಂದಾಗಿ ಬಡ ರೈತ ಪದ್ಮಶ್ರಿ ಪ್ರಶಸ್ತಿಯನ್ನೇ ತಿಂದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Ad Widget . Ad Widget .

ದೈತಾರಿ ಅವರು ನಾನು ಪ್ರಶಸ್ತಿ ವಾಪಾಸ್ಸು ಕೊಡುತ್ತೇನೆ. ನನಗೆ ಅನ್ನ ಕೊಡಿ. ತಿಂಗಳಿಗೆ ಸಿಗುವ 700 ಪೆನ್ಸನ್ ಸಾಕಾಗುವುದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಪುಟ್ಟ ಜೋಪಡಿಯಲ್ಲಿ ಬದುಕುವ ದೈತಾರಿ ಅವರಿಗೆ ಪದ್ಮಶ್ರಿ ಬಂದ ಮೇಲೆ ಕೆಲಸವೂ ಇಲ್ಲ ಇತ್ತ ಇದ್ದ ಒಂದು ಸೂರು ಬೀಳುವ ಪರಿಸ್ಥಿತಿಯಿದೆ. ಹಸಿವಿನಿಂದ ಇರುವೆ ಮೊಟ್ಟೆಯನ್ನು ನಾವು ತಿನ್ನುತ್ತಿದ್ದೇವೆ , ಪ್ರಶಸ್ತಿಯಿಂದ ಬದುಕೇ ಹಾಳಾಯ್ತು ಎಂದು ದೈತಾರಿ ಹೇಳಿದ್ದಾರೆ. ಸರ್ಕಾರ ಇವರ ಸಹಾಯಕ್ಕೆ ನಿಲ್ಲಬೇಕಿದೆ.

Leave a Comment

Your email address will not be published. Required fields are marked *