ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕನ ಮೇಲೆ ಮೂತ್ರ ವಿಸರ್ಜನೆ : ಇಬ್ಬರ ಬಂಧನ

ಮಹಾರಾಷ್ಟ್ರ : ದಲಿತ ಬಾಲಕನ ಮೇಲೆ ಮೂತ್ರವಿಸರ್ಜಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

Ad Widget ... ..

ಜಮೀನಿನ ಮಾಲಕ ರವೀಂದ್ರ ಮತ್ತು ಪ್ರವೀಣನನ್ನು ಬಂಧಿತ ಆರೋಪಿಗಳು.
ಬಾಲಕನ ಮೇಲಿನ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮಾವಿನ ಕಾಯಿ ಕೀಳಿದ್ದಕ್ಕೆ ಬಾಲಕನನ್ನು ಪ್ರಶ್ನಿಸಿ ಮರಕ್ಕೆ ಕಟ್ಟಿಹಾಕಿ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿ ಹಲ್ಲೆ ನಡೆಸಿರುವುದು ಕಂಡುಬಂದಿದೆ.

Ad Widget

ಘಟನೆ ಬಗ್ಗೆ ಸಂತ್ರಸ್ತ ಬಾಲಕ ಮನೆಯಲ್ಲಿ ಹೇಳಿದ್ದು, ಪೋಷಕರು ಕೇಸ್ ದಾಖಲಿಸಿದ್ದಾರೆ.

ಮಾವು ಕೀಳಿದ ಕಾರಣಕ್ಕೆ ದಲಿತ ಬಾಲಕನ ಮೇಲೆ ಜಮೀನಿನ ಮಾಲಕ ಎಸಗಿರುವ ಅಮಾನವೀಯ ಕೃತ್ಯಕ್ಕೆ ನೆಟ್ಟಿಗರು ವ್ಯಾಪಕವಾಗಿ ಖಂಡಿಸಿದ್ದಾರೆ.

Leave a Comment

Your email address will not be published. Required fields are marked *