Ad Widget .

ಮಂಗಳೂರು: ತನ್ನ ಮಗುವನ್ನೇ ಕಿಡ್ನಾಪ್ ಮಾಡಿದನಾ ತಂದೆ…!? | ಠಾಣೆ ಮೆಟ್ಟಿಲೇರಿದ ತಾಯಿ

ಮಂಗಳೂರು:ನಗರದ ಕದ್ರಿಯಲ್ಲಿ ತಂದೆಯೇ ತನ್ನ ಮಗುವನ್ನು ಕಿಡ್ನಾಪ್ ಮಾಡಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ಮಗುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Ad Widget . Ad Widget .

ಮನೆಯಿಂದ 14 ತಿಂಗಳ ತನ್ನ ಮಗುವನ್ನು ಮಾ.23ರಂದು ನನ್ನ ಗಂಡನೇ ಕಿಡ್ನಾಪ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು, ತನ್ನ ಪತಿಯ ವಿರುದ್ಧವೇ ಮೇ 26 ರ ರಂದು ಪೊಲೀಸ್ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ, ನನ್ನ ಪತಿ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು ಅಪರಾಧ ಚಟುವಟಿಕೆಗಳಲ್ಲಿ ತೋಡಾಗಿಕೊಂಡಿದ್ದು, ಆತನ ವಿರುದ್ದ ಕೊಡಗು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ಹಾಗೂ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಮಾ. 23 ರಂದು ಸಂಜೆ 4 ಗಂಟೆ ಸುಮಾರಿಗೆ ಕಾರಿನಲ್ಲಿ ಮನೆಗೆ ಬಂದು ನನ್ನ 14 ತಿಂಗಳ ಹೆಣ್ಣು ಮಗುವನ್ನು ಹಣಕ್ಕಾಗಿ ಮಾರಾಟ ಮಾಡುವ ಕ್ರಿಮಿನಲ್ ಉದ್ದೇಶದಿಂದ ಪತಿ ಮಗುವನ್ನು ಅಪಹರಿಸಿದ್ದಾನೆ. ಅಪರಾಧದಲ್ಲಿ ಪತಿಯ ಸಂಬಂಧಿಕರು ಸಹ ಆತನೊಂದಿಗೆ ಸಹಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

Ad Widget . Ad Widget .

ಆರೋಪಿ ಮತ್ತು ದೂರುದಾರ ಮಹಿಳೆ (ಗಂಡ ಮತ್ತು ಹೆಂಡತಿ) ಅನ್ಯಕೋಮಿನವರಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ಮಾತ್ರವಲ್ಲದೆ ಪತಿ ತಾನು ನಂಬಿದ್ದ ಧರ್ಮವನ್ನು ಅನುಸರಿಸಲು ಹೆಂಡತಿಗೆ ಒತ್ತಡ ಹೇರುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಸೆಕ್ಷನ್ 363, 370, 373 ಆರ್ / ಡಬ್ಲ್ಯೂ 149 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *