Ad Widget .

ಮಗನಿಗೆ ಗೊತ್ತಿಲ್ಲದೆ ಸೊಸೆಯನ್ನೇ 80 ಸಾವಿರಕ್ಕೆ ಮಾರಿದ ಮಾವ

Ad Widget . Ad Widget .

ಲಖನೌ: ಅವರಿಬ್ಬರದ್ದು ಲವ್​ ಮ್ಯಾರೇಜ್. ಸೋಶಿಯಲ್​ ಮೀಡಿಯಾ ಮೂಲಕ ಸ್ನೇಹಿತರಾಗಿದ್ದ ಅಸ್ಸಾಂ ಮೂಲದ ಯುವತಿ ಮತ್ತು ಉತ್ತರ ಪ್ರದೇಶದ ಮೂಲದ ಪ್ರಿನ್ಸ್ ಮದುವೆಯಾಗಿದ್ದರು. ಪ್ರಿನ್ಸ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಗಾಜಿಯಾಬಾದ್​ನಲ್ಲೇ ವಾಸ ಆರಂಭಿಸಿದ್ದರು.

Ad Widget . Ad Widget .

ಈ ಮಧ್ಯೆ ಪ್ರಿನ್ಸ್​ನ ತಂದೆ ಸೊಸೆಯನ್ನು ನಮ್ಮ ಮನೆಗೆ ಬಾ ಎಂದು ಕರೆದಿದ್ದಾರೆ. ಜೂನ್​ 4ರಂದು ಸೊಸೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಮತ್ತೊಬ್ಬ ಯುವಕನಿದ್ದು, ಸಂಜೆ ವೇಳೆ ಆತನೇ ನಿನ್ನನ್ನು ಗಂಡನ ಮನೆ ಬಳಿ ಬಿಡುತ್ತಾನೆ ಎಂದು ಕಳುಹಿಸಿಕೊಟ್ಟಿದ್ದಾನೆ. ಆದರೆ ಆತ ಆಕೆಯನ್ನು ಗಾಜಿಯಾಬಾದ್​ಗೆ ಕರೆದುಕೊಂಡು ಹೋಗಿದ್ದಾನೆ.
ಈ ರೀತಿ ಏನೋ ಅನಾಹುತವಾಗಿದೆಯೆಂದು ಯುವತಿಯ ಸಹೋದರ ಪ್ರಿನ್ಸ್​ಗೆ 5ನೇ ತಾರೀಖಿನಂದು ಕರೆ ಮಾಡಿ ತಿಳಿಸಿದ್ದಾನೆ.
ತಕ್ಷಣ ಪ್ರಿನ್ಸ್​ ತನ್ನ ತಂದೆಯ ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿ ಹೆಂಡತಿಯಾಗಲೀ ಅಥವಾ ತಂದೆಯಾಗಲಿ ಇಲ್ಲದಿರುವುದು ಕಂಡು ಗಾಬರಿಗೊಂಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಜತೆ ಆರೋಪಿಯನ್ನು ಹುಡುಕಿದ್ದಾರೆ. ಮಾವ ತನ್ನ ಸೊಸೆಯನ್ನು 80 ಸಾವಿರ ರೂಪಾಯಿಗೆ ಯುವಕನಿಗೆ ಮಾರಿದ್ದಾಗಿ ಹೇಳಲಾಗಿದೆ. ಹಾಗೂ ಆ ಯುವಕ ಆಕೆಯೊಂದಿಗೆ ಮದುವೆ ಮಾಡಿಕೊಳ್ಳಲೂ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *