ಎರಡು ಮಕ್ಕಳ ತಾಯಿ, ಮಗನ ವಯಸ್ಸಿನ ಬಾಲಕನ ಜೊತೆ ಪರಾರಿ: ಕಾರಣ ನಿಗೂಢ

ಛತ್ತೀಸ್‌ಗಢ: ಇಲ್ಲಿನ ಕೋರಬಾದದಲ್ಲಿ 30 ವರ್ಷದ ಮಹಿಳೆಯೊಬ್ಬಳು ತನ್ನ ಮಗನ ಸಮನವಾದ 14 ವರ್ಷದ ಬಾಲಕನೊಂದಿಗೆ ಓಡಿ ಹೋದ ಘಡನೆ ನಡೆದಿದೆ. ಈ ಮಹಿಳೆಗೆ ಎರಡು ಮಕ್ಕಳಿದ್ದು ಈ ರೀತಿ ಪರಾರಿಯಾಗಿರುವುದು ಆತಂಕ ಉಂಟುಮಾಡಿದೆ.

Ad Widget ... ..

ಈಕೆಯ ಗಂಡ ಸರಕಾರಿ ನೌಕರನಾಗಿದ್ದ. ಈಕೆಗೆ ಅದೇ ಊರಿನ ಬಾಲಕನೊಂದಿಗೆ ಪ್ರೇಮಾಂಕುರಗೊಂಡಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರ ನಡುವೆ ಕುಚುಕು ಪ್ರೇಮ ಕೂಡ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇವರಿಬ್ಬರ ನಡುವಿನ ಈ ವಿಚಿತ್ರ ಪ್ರೇಮ ದೈಹಿಕ ಸಂಪರ್ಕದವರೆಗೂ ತಲುಪಿತ್ತು. ಇದಕ್ಕೆ ಆಕೆಯ ಮಕ್ಕಳು ಮತ್ತು ಪತಿಯಿಂದ ಎಲ್ಲೋ ತೊಂದರೆ ಯಾಗುತ್ತಿರುವುದು ಮನಗಂಡು ದೈಹಿಕ ಪ್ರೇಮಕ್ಕೆ ಯಾರಿಂದಲು ತೊಂದರೆ ಉಂಟಾಗಬಾರೆದೆಂದು ಈಕೆ ಬಾಲಕನೊಂದಿಗೆ ಗಂಟುಮೂಟೆ ಕಟ್ಟಿ ಪರಾರಿಯಾಗಿದ್ದಾಳೆ.

Ad Widget

ಇನ್ನು,ಈ ವಿಚಾರವಾಗಿ ಎರಡೂ ಕುಟುಂಬಗಳ ಸದಸ್ಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದರು. ತಕ್ಷಣ ಪೊಲೀಸರು ಇವರಿಬ್ಬರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಕೊಂಡಿದ್ದಾರೆ. ತನಿಖೆ ವೇಳೆ ಈ ಮಹಿಳೆ ಬಾಲಕನೊಂದಿಗೆ ಕಳೆದ 8 ತಿಂಗಳಿನಿಂದ ದೈಹಿಕ ಸಂಪರ್ಕ ಬೆಳೆಸಿರುವುದು ತಿಳಿದುಬಂದಿದೆ. ಅಲ್ಲದೆ ಇವರಿಬ್ಬರ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋಗಳಿದ್ದು ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಮಹಿಳೆಯ ಮೇಲೆ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Leave a Comment

Your email address will not be published. Required fields are marked *